×
Ad

ರಾಷ್ಟ್ರೀಯ ಹಿಂದೂ ಆಂದೋಲನದಿಂದ ಪ್ರತಿಭಟನೆ

Update: 2016-06-15 23:20 IST

ಮಂಗಳೂರು,ಜೂ.15: ಸಾಧ್ವಿ ಪ್ರಜ್ಞಾಸಿಂಗ್‌ಗೆ 8 ವರ್ಷಗಳ ಕಾಲ ಕಿರುಕುಳ ನೀಡಿದ ಪೊಲೀಸರು ಹಾಗೂ ಅಂದು ಆಡಳಿತದಲ್ಲಿದ್ದವರ ಮೇಲೆ ಕ್ರಮ ಕೈಗೊಳ್ಳಬೇಕು, ಓಂನ ಲಾಭವನ್ನು ಗಮನದಲ್ಲಿಟ್ಟುಕೊಂಡು ಯೋಗದಿನದ ಯೋಗಕ್ರಿಯೆಯಲ್ಲಿ ಓಂ ಉಪಯೋಗವನ್ನು ಕಡ್ಡಾಯಗೊಳಿಸಬೇಕು, ಹರಿಪರ್ವತವನ್ನು ಕೋಹ-ಎ-ಮಾರನ್ ಎಂದು ನಾಮಕರಣವನ್ನು ರದ್ದುಪಡಿಸಿ ಕಾಶ್ಮೀರದ ಇಸ್ಲಾಮೀಕರಣವನ್ನು ತಡೆಗಟ್ಟಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ರಾಷ್ಟ್ರೀಯ ಹಿಂದೂ ಆಂದೋಲನದಿಂದ ಇಂದು ದ.ಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನದ ಜಿಲ್ಲಾ ಮುಖಂಡರುಗಳಾದ ಪ್ರಭಾಕರ ಪಡಿಯಾರ, ಸಂಗೀತಾ ಪ್ರಭು, ಧರ್ಮೇಂದ್ರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News