ಭಾರತದಲ್ಲಿ ಜಾಗತಿಕ ಹೂಡಿಕೆ ಪ್ರಮಾಣದಲ್ಲಿ ಕುಸಿತ

Update: 2016-06-15 18:33 GMT

ವಿಶ್ವಸಂಸ್ಥೆ, ಜೂ. 15: ಭಾರತದಲ್ಲಿ ಸರಕಾರಿ-ಖಾಸಗಿ ಕ್ಷೇತ್ರದಲ್ಲಿ 2015ರಲ್ಲಿ 10 ವರ್ಷಗಳಲ್ಲೇ ಕಡಿಮೆ ಬಂಡವಾಳ ಹೂಡಿಕೆಯಾಗಿದೆ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಹೇಳಿದೆ.

2015ರಲ್ಲಿ ಜಾಗತಿಕ ಬಂಡವಾಳವು 111.6 ಬಿಲಿಯ ಡಾಲರ್‌ಗೆ ಇಳಿದಿದೆ ಹಾಗೂ ಇದು 2010ರಿಂದ 2014ರವರೆಗಿನ 5 ವರ್ಷಗಳ ಸರಾಸರಿ 124.1 ಬಿಲಿಯ ಡಾಲರ್‌ಗಿಂತ ಕಡಿಮೆಯಾಗಿದೆ ಎಂದು ತನ್ನ ಇತ್ತೀಚಿನ ವರದಿಯಲ್ಲಿ ವಿಶ್ವಬ್ಯಾಂಕ್ ತಿಳಿಸಿದೆ.

‘‘ಭಾರತದಲ್ಲಿ 10 ವರ್ಷಗಳಲ್ಲೇ ಕಡಿಮೆ ಬಂಡವಾಳ ಹೂಡಿಕೆಯಾಗಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಕೇವಲ ಆರು ರಸ್ತೆ ಯೋಜನೆಗಳು ಅಂತಿಮ ಹಂತವನ್ನು ತಲುಪಿವೆ’’ ಎಂದು ಅದು ಹೇಳಿದೆ.

‘‘ಈ ಹಿಂದಿನಂತೆ, ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಯೋಜನೆಗಳು ಜಾರಿಯಾಗಿವೆ (43ರಲ್ಲಿ 36). ಉಳಿದಂತೆ ಪಾಕಿಸ್ತಾನದಲ್ಲಿ ನಾಲ್ಕು, ನೇಪಾಳದಲ್ಲಿ ಎರಡು ಮತ್ತು ಬಾಂಗ್ಲಾದೇಶದಲ್ಲಿ ಒಂದು ಯೋಜನೆ ಜಾರಿಯಾಗಿವೆ. ಭಾರತಕ್ಕೆ ಲಭಿಸಿದ 36 ಯೋಜನೆಗಳ ಪೈಕಿ 26 ಯೋಜನೆಗಳು ನವೀಕರಣಗೊಳಿಸಬಹುದಾದ ಇಂಧನಕ್ಕೆ ಸಂಬಂಧಿಸಿವೆ. ಪಾಕಿಸ್ತಾನದ ಎಲ್ಲ ಯೋಜನೆಗಳು ನವೀಕರಣಗೊಳಿಸಬಹುದಾದ ಇಂಧನಕ್ಕೆ ಸಂಬಂಧಿಸಿದವುಗಳಾಗಿವೆ’’.

‘‘ಚೀನಾದಲ್ಲೂ ವಿದೇಶಿ ಬಂಡವಾಳ ಹೂಡಿಕೆ ಗಣನೀಯ ಪ್ರಮಾಣದಲ್ಲಿ ಇಳಿದಿದೆ’’ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News