ಕೇವಲ ಅಂಕಗಳಿಸುವುದೇ ಶಿಕ್ಷಣದ ಗುರಿಯಾಗದಿರಲಿ: ಶಕುಂತಳಾ ಶೆಟ್ಟಿ
ಪುತ್ತೂರು: ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ನೀರಿನ ಟ್ಯಾಂಕ್ ಉದ್ಘಾಟನೆ ಮತ್ತು ಕಾಲೇಜಿನ ನಾಮಫಲಕ ಅನಾವರಣ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಗುರುವಾರ ನಡೆಯಿತು. ಕಾಲೇಜಿನ ನಾಮ ಫಲಕವನ್ನು ಪುತ್ತೂರು ಶಾಸಕಿ, ಸರಕಾರದ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ ಶೆಟ್ಟಿ ಅನಾವರಣಗೊಳಿಸಿದರು.
ನೂತನ ನೀರಿನ ಟ್ಯಾಂಕನ್ನು ಕಾಲೇಜು ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷರಾದ ಗಣೇಶ್ ರೈ ಆನಾಜೆ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಪಿಯುಸಿ ಫಲಿತಾಂಶದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರಾದ ಸಾಹಿತ್ಯ , ಪಲ್ಲವಿ , ಪವಿತ್ರ, ಫಾತಿಮತ್ ಸುನೈನ , ಕುಮಾರಿ ನೇಸಿರಾ ,ಸೌಮ್ಯ ಹಾಗೂ ವಿಜ್ಞಾನ ವಿಭಾಗದ ನೆಬಿಸತ್ಲ್ ಇರ್ಫಾನ ಹಾಗೂ ಪ್ರೌಢ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಶ್ರಾವ್ಯ ಇವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಕುಂತಳಾ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಕೇವಲ ಅಂಕ ಗಳಿಕೆ ಮಾತ್ರ ಮುಖ್ಯ ಅಲ್ಲ ನೈತಿಕತೆ ಮತ್ತು ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅಧ್ಯಾಪಕರು ಮತ್ತು ಪೋಷಕರು ಗಮನ ಹರಿಸಬೇಕು ಎಂದು ಹೇಳಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗೌರವ ಸ್ವೀಕರಿಸಿದ ವಿದ್ಯಾರ್ಥಿಗಳ ಪರವಾಗಿ ಸಾಹಿತ್ಯ ಅನಿಸಿಕೆ ವ್ಯಕ್ತಪಡಿಸಿದರು. ಸಭಾ ಕಾರ್ಯಕ್ರಮದಲ್ಲಿ ಆನಾಜೆ ಗಣೇಶ್ ರೈ ,ಅಭಿವೃದ್ದಿ ಸಮಿತಿ ಸದಸ್ಯರಾದ ನಾಗರಾಜ್ ಭಟ್ , ಕೆ.ಪಿ ಭಟ್ ಕೋನಡ್ಕ , ವೆಂಕಟ್ರಾವ್ ಬಿ, ಬಾಲ ಚಂದ್ರ ರೈ ಆನಾಜೆ, ತಿಮ್ಮಣ್ಣ ರೈ ಆನಾಜೆ , ಮಾಧವ ಪೂಜಾರಿ ರೆಂಜ , ಮೊಯಿದು ಕುಂಞ ಕೋನಡ್ಕ , ಶ್ರೀಮತಿ ಸುಮಿತ್ರ , ಕೆಡಿಪಿ ಸದಸ್ಯ ಕೃಷ್ಣ ಪ್ರಸಾದ್ ಆಳ್ವ, ಸಾಜ ಶಿವರಾಮ ಆಳ್ವ,ವೆಂಕಟ್ರಮಣ ಬೋರ್ಕರ್ ಬ್ರಹ್ಮರ ಗುಂಡ , ಸತ್ಯನಾರಾಯಣ ರೈ ನುಳಿಯಾಲು ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಎಂ ಬಾಲಕೃಷ್ಣ ರಾವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕಿ ರಜನಿ ಮತ್ತು ಪ್ರೌಢ ಶಾಲಾ ಶಿಕ್ಷಕಿ ಪೂರ್ಣಿಮಾ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಉಪನ್ಯಾಸಕ ಮಹೇಶ್ ಎನ್ ವಂದಿಸಿ ಉಪನ್ಯಾಸಕ ಪದ್ಮನಾಭ ಎಸ್ ನಿರೂಪಿಸಿದರು.