ಬಾಯಾರ್ ಸ್ಪೀಡ್ ಕಾರ್ಟ್ ಡಾಟ್ ಕಾಮ್‌ಗೆ ಚಾಲನೆ
ಮಂಗಳೂರು, ಜೂ.16: ಆನ್‌ಲೈನ್ ಶಾಪಿಂಗ್ ಪ್ರಕ್ರಿಯೆಯನ್ನು ಸರಳೀಕರಿಸಿ ತಯಾರಿಸಲಾದ ಬಾಯಾರ್ ಸ್ಪೀಡ್‌ಕಾರ್ಟ್ ಡಾಟ್ ಕಾಮ್ ಎಂಬ ಆನ್‌ಲೈನ್ ಶಾಪಿಂಗ್ ಸಂಸ್ಥೆಯನ್ನು ಮೊಬೈಲ್ ಆ್ಯಪ್‌ಗೆ ಚಾಲನೆ ನೀಡುವ ಮೂಲಕ ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕತೆ ಮತ್ತು ತಂತ್ರಜ್ಞಾನಗಳು ಬೆಳವಣಿಗೆ ಕಾಣುತ್ತಿದ್ದು ಇದನ್ನು ಬಳಸಿಕೊಂಡು ಆರಂಭಗೊಂಡಿರುವ ಬಾಯಾರ್ ಸ್ಪೀಡ್ ಕಾರ್ಟ್ ಡಾಟ್ ಕಾಮ್‌ನಿಂದ ಜನರು ಪ್ರಯೋಜನ ಪಡೆಯಲಿದ್ದಾರೆ. ಈ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹೇಳಿದರು.
ಸಂಸ್ಥೆಯ ವೆಬ್‌ಸೈಟ್‌ನ್ನು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಹೈದರ್ ಪರ್ತಿಪಾಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆನ್‌ಲೈನ್ ಶಾಪಿಂಗ್‌ನಲ್ಲಿ ಕೈಗೆಟುಕುವ ದರದಲ್ಲಿ ಜನರಿಗೆ ವಸ್ತುಗಳು ಸಿಗುತ್ತಿರುವ ಕಾರಣಕ್ಕೆ ಆನ್‌ಲೈನ್ ಶಾಪಿಂಗ್‌ಗೆ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬಾಯಾರ್ ಸ್ಪೀಡ್‌ಕಾರ್ಟ್ ಡಾಟ್ ಕಾಮ್ ಕೂಡ ದೇಶಾದ್ಯಂತ ಯಶಸ್ವಿಯಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಷಾ ಮತ್ತು ಉಳ್ಳಾಲ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ದಿನೇಶ್, ಬಾಯಾರ್ ಸ್ಪೀಡ್ ಕಾರ್ಟ್ ಡಾಟ್ ಕಾಮ್‌ನ ಮಾಲಕ ಸಿದ್ದೀಕ್ ಬಾಯಾರ್ ಉಪಸ್ಥಿತರಿದ್ದರು. ಮುಹಮ್ಮದ್ ರಫೀಕ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.
ಬಾಯಾರ್ ಸ್ಪೀಡ್ ಕಾರ್ಟ್ ಡಾಟ್ ಕಾಮ್‌ನ ವಿಶೇಷತೆ
ಗ್ರಾಹಕರಿಗೆ ಸುಲಭವಾಗುವ ನಿಟ್ಟಿನಲ್ಲಿ ಖರೀದಿಯನ್ನು 3 ಸುಲಭ ವಿಧಾನದಲ್ಲಿ ಸರಳೀಕರಿಸಲಾಗಿದೆ. ಖರೀದಿಯನ್ನು ಖಾತರಿ ಪಡಿಸಿದವರಿಗೆ ಒಂದು ಗಂಟೆಯೊಳಗೆ ಉತ್ಪನ್ನಗಳನ್ನು ಮನೆಗೆ ತಲುಪಿಸಲಾಗುವುದು. ಗ್ರಾಹಕರು ಒಂದು ಉತ್ಪನ್ನವನ್ನು ಆಯ್ಕೆ ಮಾಡಿದರೆ ಅವರಿಗೆ ಆಯ್ಕೆಗೆ 5 ಉತ್ಪನ್ನಗಳನ್ನು ನೀಡಲಾಗುತ್ತದೆ. ಅತ್ಯುತ್ತಮ ಗುಣಮಟ್ಟದ ವಸ್ತುಗಳು ಕಡಿಮೆ ದರದಲ್ಲಿ ಸಿಗಲಿದೆ. ಭಾರತೀಯ ಅಂಚೆ ಇಲಾಖೆಯೊಂದಿಗೆ ಕರಾರು ಮಾಡಿಕೊಂಡು ದೇಶಾದ್ಯಂತ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ.
ಭಾರತೀಯ ಅಂಚೆ ವ್ಯಾಪ್ತಿಗೆ ಒಳಪಡುವ ಗ್ರಾಮಾಂತರ ಪ್ರದೇಶ ಸೇರಿ ಎಲ್ಲಾ ಮನೆಗಳಿಗೂ ಕ್ಯಾಶ್ ಆನ್ ಡೆಲಿವರಿ ಆಯ್ಕೆಯ ಮೂಲಕವೂ ವಿತರಿಸಲಾಗುವುದು. ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಉತ್ಪನ್ನವನ್ನು ಆಯ್ಕೆ ಮಾಡಿ ‘ಆರ್ಡರ್ ತ್ರೂ ವಾಟ್ಸಪ್’ಗೆ ಕ್ಲಿಕ್ ಮಾಡಿ ಗ್ರಾಹಕರು ಹೆಸರಿನೊಂದಿಗೆ ವಾಟ್ಸಾಪ್ ನಂಬರ್ ನೀಡಿದಲ್ಲಿ ಸಂಪರ್ಕಿಸಲಾಗುವುದು. ಗ್ರಾಹಕರು 9446655111ಗೆ ಸಂದೇಶ ಕಳುಹಿಸಿದರೆ ಪ್ರತಿದಿನ ಅಪ್‌ಡೇಟ್ ಮಾಡಲಾಗುವುದು. ಆ ಮೂಲಕವು ಖರೀದಿ ಮಾಡಬಹುದಾಗಿದೆ ಎಂದು ಮಾಲಕ ಬಾಯಾರ್ ಸ್ಪೀಡ್ ಕಾರ್ಟ್ ಡಾಟ್ ಕಾಮ್‌ನ ಮಾಲಕ ಸಿದ್ದೀಕ್ ಬಾಯಾರ್ ತಿಳಿಸಿದ್ದಾರೆ.