×
Ad

ರಕ್ಷಿತಾರಣ್ಯದಿಂದ ಮರ ಕಳವು: ಲಾರಿ, ಮರ ವಶ

Update: 2016-06-16 21:49 IST

ಬೆಳ್ತಂಗಡಿ, ಜೂ.16: ಮುಂಡಾಜೆ ಕಾಪು ರಕ್ಷಿತಾರಣ್ಯದಿಂದ ಮರ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ಲಾರಿ ಹಾಗೂ ಲಕ್ಷಾಂತರ ರೂ. ಮೌಲ್ಯದ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿದೆ.

ಬುಧವಾರ ಮುಂಡಾಜೆಯ ಸೀಟ್ ಬಳಿಯ ಮೂಲಾರ್ ರಸ್ತೆಯ ರಕ್ಷಿತಾರಣ್ಯದಲ್ಲಿ ಹೆಬ್ಬಲಸಿನ ಮರವನ್ನು ಕಡಿಯಲಾಗಿತ್ತು. ಸಲಗವನ್ನು ತರಿಸಿ ಮರ ದೂಡುವ, ಲಾರಿಗೆ ತುಂಬಿಸುವ ಕೆಲಸ ನಡೆದಿತ್ತು. ಈ ಬಗ್ಗೆ ಸ್ಥಳೀಯರು ಬೆಳ್ತಂಗಡಿ ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳದಿರುವುದು ಕಂಡಾಗ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಅದರಂತೆ ಗುರುವಾರ ಸ್ಥಳೀಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡದೇ ಆಗಮಿಸಿದ ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿದೆ. ಮರದ ದಿಮ್ಮಿ, ಲಾರಿ ಹಾಗೂ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News