×
Ad

ಬ್ರಿಟನ್: ಲೇಬರ್ ಪಾರ್ಟಿ ಮಹಿಳಾ ಎಂಪಿ ಹತ್ಯೆ!

Update: 2016-06-16 22:13 IST

 ಲಂಡನ್, ಜೂನ್ 17: ಬ್ರಿಟನ್‌ನ ಪ್ರತಿಪಕ್ಷ ಲೇಬರ್ ಪಾರ್ಟಿಯ ಮಹಿಳಾ ಸಂಸತ್ಸದಸ್ಯೆ ಗುಂಡೇಟಿಗೀಡಾಗಿ ಮೃತರಾಗಿದ್ದಾರೆ. ಉತ್ತರ ಇಂಗ್ಲೆಂಡ್‌ನ ಸ್ವಕ್ಷೇತ್ರವಾದ ಬಾಟ್ಲಿ ಆಂಟ್‌ಸೆನ್‌ನಲ್ಲಿ 41ವರ್ಷದ ಜೋ ಕೋಕ್ಸ್ ಗುಂಡೇಟಿಗೀಡಾಗಿ ಮೃತರಾದವರು. ಗುಂಡು ಹಾರಿಸಿದ ಐವತ್ತೆರಡು ವರ್ಷದ ವ್ಯಕ್ತಿಯನ್ನು ಮಾರ್ಕೆಟ್ ಸ್ಟ್ರೀಟ್‌ನಲ್ಲಿ ನಂತರ ಬಂಧಿಸಲಾಯಿತೆಂದು ವೆಸ್ಟ್‌ಯಾರ್ಕ್‌ಶೈರ್ ಪೊಲೀಸರು ತಿಳಿಸಿದ್ದಾರೆ.

ಈತ ಗುಂಡು ಹಾರಿಸಿ ಆನಂತರ ಕೊಕ್ಸ್ ರಿಗೆ ಚೂರಿಯಿಂದ ತಿವಿದಿದ್ದಾನೆ. ತನ್ನ ಕ್ಷೇತ್ರದಲ್ಲಿ ವಾರಾಂತ್ಯದ ಸಭೆಯಲ್ಲಿ ಭಾಗವಹಿಸಲು ಕೋಕ್ಸ್ ಬಂದಿದ್ದರು. ಇಂಗ್ಲೆಂಡ್ ಯುರೋಪಿಯನ್ ಯೂನಿಯನ್ ಸಂಬಂಧಿಸಿದ ಸದಸ್ಯದ ಕುರಿತು ಜನಮತಗಣನೆ ನಡೆಯಲಿರುವ ವೇಳೆ ಮಹಿಳಾ ಎಂಪಿಯ ಹತ್ಯೆಗೈಯ್ಯಲಾಗಿದೆ. ಜೋ ಕೋಕ್ಸ್  ಸದಸ್ಯತ್ವವನ್ನು ಬೆಂಬಲಿಸುತ್ತಿದ್ದರು. ಹಳೆಯ ಕೋವಿಯಿಂದ ಓರ್ವ ಹಠಾತ್ ಗುಂಡು ಹಾರಿಸಿದ್ದನ್ನು ನೋಡಿದೆ ಎಂದು ಪ್ರತ್ಯಕ್ಷದರ್ಶಿ ಕಾಫಿಶಾಪ್ ಮಾಲಕ ಕ್ಲಾರ್ಕ್ ರೋತ್ತೊಲ್ ಪೊಲೀಸರಿಗೆ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News