×
Ad

‘ಬರಕಾಅ್ ಸ್ಕೂಲ್’ನಲ್ಲಿ ವಿಮಾನ ಮಾದರಿಗಳ ಪ್ರದರ್ಶನ

Update: 2016-06-16 23:29 IST

ಮಂಗಳೂರು, ಜೂ.16: ಬರಕಾಅ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ವಿಮಾನ ಮಾದರಿಗಳ ಪ್ರದರ್ಶನ ಇತ್ತೀಚೆಗೆ ಶಾಲಾ ಮೈದಾನದಲ್ಲಿ ನಡೆಯಿತು. ವಿಮಾನ, ರಾಕೆಟ್ ಹಾಗೂ ಹೆಲಿಕಾಪ್ಟರ್‌ಗಳ ರಚನೆ ಹಾಗೂ ಹಾರಾಟದ ವಿಧಾನವನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ತಿಳಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಭೂಮಿಯಿಂದ 800 ಮೀಟರ್ ಎತ್ತರದಲ್ಲಿ ಹಾರಾಟ ಮಾಡಬಲ್ಲ ವಿಮಾನದ ಮಾದರಿಯನ್ನು ಪ್ರದರ್ಶಿಸಲಾಯಿತು. ಎಳೆಯ ಮಕ್ಕಳಿಗೆ ವಿಮಾನ ಹಾರಾಟ ಹಾಗೂ ರಚನೆಯ ತಂತ್ರಜ್ಞಾನವನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ಪರಿಚಯಿಸಿದಾಗ ಅವರು ತಂತ್ರಜ್ಞಾನದ ಬಗ್ಗೆ ಅತ್ಯಂತ ಸುಲಭವಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಬರಕಾಅ್ ಇಂಟರ್‌ನ್ಯಾಷಲ್ ಸ್ಕೂಲ್ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News