ಉಚಿತ ಸ್ವಉದ್ಯೋಗ ತರಬೇತಿ
ಉಡುಪಿ, ಜೂ.16: ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆ ಉಚಿತ ಸ್ವಉದ್ಯೋಗ ತರಬೇತಿಯನ್ನು ಆಯೋಜಿಸಿದ್ದು, ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 18ರಿಂದ 45 ವರ್ಷದೊಳಗಿನ ಸ್ವಉದ್ಯೋಗ ಮಾಡಲು ಆಸಕ್ತಿ ಹೊಂದಿದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿಯ ಸಂದರ್ಭದಲ್ಲಿ ಸಂಬಂಧಪಟ್ಟ ವಿಷಯದ ಜೊತೆಗೆ ಉದ್ಯಮ ನಿರ್ವಹಣೆ ಹಾಗೂ ಬ್ಯಾಂಕಿನ ವ್ಯವಹಾರದ ಬಗ್ಗೆ ಮಾಹಿತಿ ನೀಡಲಾಗುವುದು. ವಸತಿ ಸಂಪೂರ್ಣ ಉಚಿತವಾಗಿದ್ದು, ಆಸಕ್ತರು ಕೂಡಲೇ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ವಯಸ್ಸು, ವಿದ್ಯಾರ್ಹತೆ ಅನುಭವಗಳ ವಿವರಗಳೊಂದಿಗೆ ತಕ್ಷಣ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ದೂ.ಸಂ.: 0820-2563455, (ಮೊ) 9449862808 ಸಂಪರ್ಕಿ ಸುವಂತೆ ಅಥವಾ ವೆಬ್‌ಸೈಟ್ www.rudsetitraining.orgಗೆ ಭೇಟಿ ನೀಡಬಹುದು. ತರಬೇತಿ ವಿಷಯಗಳು: 1.ವಿದ್ಯುತ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್‌ಸೆಟ್ ನಿರ್ವಹಣೆ ತರಬೇತಿ (ಜು.4ರಿಂದ ಆ.2ರವರೆಗೆ 30 ದಿನಗಳು), 2.ಡಿಜಿಟಲ್ ಫೋಟೋಗ್ರಫಿ ಮತ್ತು ವೀಡಿಯೊಗ್ರಫಿ ತರಬೇತಿ (ಜು.12 ರಿಂದ ಆ.1ರವರೆಗೆ 21ದಿನಗಳು), 3.ರೆಫ್ರಿಜರೇಟರ್ ಮತ್ತು ಏರ್‌ಕಂಡೀಶನ್ ದುರಸ್ತಿ ಮತ್ತು ನಿರ್ವಹಣೆ ತರಬೇತಿ (ಆ.3ರಿಂದ ಸೆ.1ರವರೆಗೆ 30 ದಿನಗಳು), 4.ಕಂಪ್ಯೂಟರ್ ಹಾರ್ಡವೇರ್ ಮತ್ತು ನೆಟ್‌ವರ್ಕಿಂಗ್ ಸರ್ವಿಸ್ ತರಬೇತಿ (ಆ.18ರಿಂದ ಅ.1ರವರೆಗೆ 45 ದಿನಗಳು), 5.ದ್ವಿಚಕ್ರ ವಾಹನ ರಿಪೇರಿ ತರಬೇತಿ (ಆ.22ರಿಂದ ಸೆ.20ರವರೆಗೆ 30 ದಿನಗಳು).
ಅರ್ಜಿ ಸಲ್ಲಿಸಬೇಕಾದ ವಿಳಾಸ: ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, 52ನೆ ಹೇರೂರು, ಬ್ರಹ್ಮಾವರ-576213 ಉಡುಪಿ ಜಿಲ್ಲೆ.