×
Ad

ಸಂಧ್ಯಾ ಕಾಲೇಜಿಗೆ ಪ್ರವೇಶಾತಿ

Update: 2016-06-16 23:32 IST

ಮಂಗಳೂರು, ಜೂ.16: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ, ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಆವರಣದಲ್ಲಿ 2016-17ನೆ ಸಾಲಿನಿಂದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜನ್ನು ಪ್ರಾರಂಭಿಸಲಾಗಿದ್ದು, ಆರ್ಥಿಕವಾಗಿ ದುರ್ಬಲವಾಗಿರುವ, ದಿನದಲ್ಲಿ ಕೆಲಸ ನಿರ್ವಹಿಸಿ ಪದವಿ ತರಗತಿಯನ್ನು ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಬಿ.ಎ./ಬಿ.ಕಾಂ. ಹಾಗೂ ಬಿ.ಸಿ.ಎ. ಪದವಿ ತರಗತಿಗಳಿಗೆ ಪ್ರವೇಶಾತಿ ಪಡೆಯಬಹುದು.
ಮಂಗಳೂರು ವಿವಿ ನಿಗದಿಪಡಿಸಿರುವ ಅತೀ ಕಡಿಮೆ ಶುಲ್ಕದಲ್ಲಿ ಪದವಿ ವ್ಯಾಸಂಗ ಮಾಡಬಹುದಾಗಿದ್ದು, ಸರಕಾರದ ವತಿ ಯಿಂದ ನೀಡುವ ವಿವಿಧ ಸ್ಕಾಲರ್‌ಶಿಪ್‌ಗಳನ್ನು ಪಡೆಯಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ ವಿವಿ ಸಂಧ್ಯಾ ಕಾಲೇಜು ಕಚೇರಿಯನ್ನು ಅಥವಾ ದೂ.ಸಂ.: 0824-2424608/ಮೊ. 9449333919ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News