ಶಿರೂರು: ಎಂಡೋಸಲ್ಫಾನ್ ಬಾಧಿತರ ಸಮಾವೇಶ
ಬೈಂದೂರು, ಜೂ.16: ಹೊಸದಿಲ್ಲಿಯ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ (ಎನ್‌ಪಿಆರ್‌ಡಿ)ಗೆ ಸಂಯೋಜಿಸಲ್ಪಟ್ಟಿರುವ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಆಶ್ರಯ ದಲ್ಲಿ ಶಿರೂರು ಗ್ರಾಪಂ ವ್ಯಾಪ್ತಿಯ ಎಂಡೋಸಲ್ಫಾನ್‌ಬಾಧಿತ ವಿಕಲಚೇತನರ ಹಾಗೂ ಪಾಲಕರ ಸಮಾವೇಶವು ಶಿರೂರು ಗ್ರಾಪಂ ಕಚೇರಿ ಸಭಾಂಗಣದಲ್ಲಿ ಇಂದು ನಡೆಯಿತು. ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ ಹೆಬ್ಬಾರ್ ಕಾಲ್ತೋಡು ಮಾತನಾಡಿ, ಕಳೆದ ಹಲವಾರು ತಿಂಗಳಿಂದ ಎಂಡೋಸಲ್ಫಾನ್ ಬಾಧಿತರಿಗೆ-ಮಾಸಿಕ ಪಿಂಚಣಿ ತಡೆ ಹಿಡಿ ದಿರುವುದರಿಂದ ಅಂಗವಿಕಲರಿಗೆ ಆರ್ಥಿಕ ವಾಗಿ ಜೀವನ ನಿರ್ವಹಣೆಗೆ ತೊಂದರೆ ಯಾಗುತ್ತಿದೆ. ಆದ ಕಾರಣ ಕೂಡಲೇ ತಡೆಹಿಡಿದ ಪಿಂಚಣಿ ಹಣವನ್ನು ಬಿಡುಗಡೆ ಮಾಡಲು ಒತ್ತಾಯಿಸಿ ಬೈಂದೂರು ತಹಶೀಲ್ದಾರ್ ಕಚೇರಿಗೆ ಮನವಿ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಶಿರೂರು ಗ್ರಾಪಂ ಉಪಾಧ್ಯಕ್ಷ ನಾಗೇಶ ಮೊಗವೀರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತ ನಾಡಿದರು. ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ವೆಂಕಟೇಶ ಕೋಣಿ, ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮಂಜುನಾಥ, ಮುಖಂಡರಾದ ಅನಿತಾ ಪಡುವರಿ, ಮೂಕಾಂಬು ಯಡ್ತರೆ, ಶಿವಾನಂದ ಮೇಸ್ತ ಶಿರೂರು, ರಾಧಾಕೃಷ್ಣ ಬೈಂದೂರು, ದೀಪಾ ಕಾಲ್ತೋಡು ಮೊದಲಾದವರು ಉಪಸ್ಥಿತರಿದ್ದರು.