ಹಾವು ಕಡಿದು ಕೂಲಿ ಕಾರ್ಮಿಕನ ಸಾವು
Update: 2016-06-16 23:34 IST
ಮಂಜೇಶ್ವರ, ಜೂ.16: ಹಾವು ಕಡಿದು ಕೂಲಿ ಕಾರ್ಮಿಕ ಸಾವಿಗೀಡಾದ ಘಟನೆ ನಡೆದಿದೆ. ಮಣಿಯಂಪಾರೆ ಬಳಿಯ ಶೇಣಿ ನಿವಾಸಿ ಪೌಲ್ ಡಿಸೋಜರ ಪುತ್ರ ಫ್ರಾನ್ಸಿಸ್ ಡಿಸೋಜ(40) ಸಾವಿಗೀಡಾದವರು. ಮನೆಯಂಗಳದಲ್ಲಿ ವಿಷಪೂರಿತ ಹಾವು ಕಡಿದ ತಕ್ಷಣ ಅವರನ್ನು ಪೆರ್ಲದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟದ್ದಾರೆ.