ಅಪರಿಚಿತ ಶವ ಪತ್ತೆ
Update: 2016-06-16 23:35 IST
ಬೈಂದೂರು, ಜೂ.16: ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಸಮುದ್ರ ತೀರದಲ್ಲಿ ಗುರುವಾರ ಬೆಳಗ್ಗೆ 8:30ಕ್ಕೆೆ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಸುಮಾರು 35ರಿಂದ 40 ವರ್ಷಪ್ರಾಯದ ಮೃತದೇಹ ಕೊಳೆತು ಹೋಗಿದೆ. ಮೃತ ವ್ಯಕ್ತಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕೇಸರಿ ಗೆರೆಗಳಿರುವ ಉದ್ದ ತೋಳಿನ ಶರ್ಟ್ ಹಾಕಿದ್ದಾರೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.