×
Ad

ಉಡುಪಿ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ: ಸಿಇಒ

Update: 2016-06-16 23:36 IST

ಉಡುಪಿ, ಜೂ.16: ಜುಲೈ 7ರಿಂದ 15ರ ವರೆಗೆ ನಡೆಯುವ ವನಮಹೋತ್ಸವ ಕಾರ್ಯ ಕ್ರಮದ ವೇಳೆ ಈ ಬಾರಿ ಉಡುಪಿ ಜಿಲ್ಲೆಯಲ್ಲಿ 1 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದ ಲಾಗಿದೆ ಎಂದು ಉಡುಪಿ ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಗುರುವಾರ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ಕೋಟಿ ವೃಕ್ಷ ನೆಡುವ ಕಾರ್ಯಕ್ರಮ ಕುರಿತ ಸಮಾ ಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಎಲ್ಲಾ ಇಲಾಖೆಗಳು, ಕೋಟಿ ವೃಕ್ಷ ನೆಡುವ ಕಾರ್ಯಕ್ರಮದಲ್ಲಿ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದ ಸಿಇಒ, ಎಲ್ಲಾ ಇಲಾಖೆಗಳು ತಮಗೆ ಅಗತ್ಯವಿರುವ ಗಿಡಗಳ ಕುರಿತು ಸಾಮಾಜಿಕ ಅರಣ್ಯ ಇಲಾಖೆ, ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಗಳಿಗೆ ಬೇಡಿಕೆಯನ್ನು ಸಲ್ಲಿಸಿ ಅಲ್ಲಿಂದ ಗಿಡಗಳನ್ನು ಪಡೆಯುವಂತೆ ಹಾಗೂ ಈ ಕಾರ್ಯಕ್ರಮದ ಕುರಿತು ಎಲ್ಲಾ ಇಲಾಖೆಗಳು ಎರಡು ದಿನಗಳಲ್ಲಿ ಸಂಪೂರ್ಣ ಕ್ರಿಯಾಯೋಜನೆ ತಯಾರಿಸಿ ನೀಡುವಂತೆ ಸೂಚಿಸಿದರು.
ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಆವರಣದಲ್ಲಿ, ಹಾಸ್ಟೆಲ್‌ಗಳ ಆವರಣದಲ್ಲಿ, ಎಲ್ಲಾ ಸರಕಾರಿ ಇಲಾಖೆಗಳ ಆವರಣದಲ್ಲಿ, ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವರಣದಲ್ಲಿ, ಅಂಗನವಾಡಿ ಕೇಂದ್ರಗಳು, ಕೈಗಾರಿಕೆಗಳ ಆವರಣದಲ್ಲಿ ಗಿಡಗ ಳನ್ನು ನೆಡುವಂತೆ ಸೂಚಿಸಿದ ಸಿಇಒ, ಗಿಡಗಳ ಕೊರತೆ ಕಂಡುಬಂದಲ್ಲಿ ಅಂಗೀಕೃತ ನರ್ಸರಿ ಗಳಿಂದ ಗಿಡಗಳನ್ನು ಖರೀದಿಸುವಂತೆ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಪಂಚಾಯತ್‌ಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳ ಕುರಿತು ಎಲ್ಲ ಗ್ರಾಪಂಗಳಿಗೆ ಮಾಹಿತಿ ನೀಡುವಂತೆ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದ ಸಿಇಒ, ಕೈಗಾರಿಕೆಗಳ ಆವರಣದಲ್ಲಿ ಕಾರ್ಯಕ್ರಮ ಏರ್ಪಡಿಸುವಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವ ಸಂದರ್ಭ, ಸ್ಥಳೀಯ ನಿವಾಸಿಗಳಿಂದ, ಸರಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಅಪರ ಜಿಲ್ಲಾಧಿಕಾರಿ ಅನುರಾಧಾ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಯುಪಿಸಿಎಲ್, ಐಎಸ್‌ಪಿಆರ್‌ಎಲ್ ಮತ್ತಿತರ ಕೈಗಾರಿಕೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News