ಮಲಬಾರ್ ಗೋಲ್ಡ್‌ನಲ್ಲಿ ‘ವಜ್ರ’ಗಳ ಪ್ರದರ್ಶನ ಉದ್ಘಾಟನೆ

Update: 2016-06-16 18:09 GMT

ಉಡುಪಿ, ಜೂ.16: ನಗರದ ಮಸೀದಿ ರಸ್ತೆಯ ರಾಮಕೃಷ್ಣ ಹೊಟೇಲ್ ಎದುರಿನ ‘ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶೋರೂಂ’ನಲ್ಲಿ ಜೂ.30ರವರೆಗೆ ನಡೆಯುವ ವೈವಿಧ್ಯಮಯ ವಜ್ರಗಳು ಹಾಗೂ ವಜ್ರಾಭರಣಗಳ ಪ್ರದರ್ಶನವನ್ನು ಇಂದು ಸಂಜೆ ಉಡುಪಿ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಡಳಿತ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು.

ಪ್ರದರ್ಶನದ ಬ್ರೈಡಲ್, ಸಾಂಪ್ರದಾಯಿಕ ಹಾಗೂ ಫ್ಯಾನ್ಸಿ ವಜ್ರಾಭರಣಗಳ ಸಂಗ್ರಹವನ್ನು ಉದ್ಘಾಟಿಸಿದ ಜಯಕರ ಶೆಟ್ಟಿ, ವಜ್ರಾಭರಣಗಳ ಪ್ರಥಮ ಗ್ರಾಹಕರಾದ ಕುಂದಾಪುರದ ವಕೀಲ ದಿನೇಶ್ ಎಂ. ಶೆಟ್ಟಿ ಮತ್ತು ಶ್ರೀನಿಧಿ ಡಿ. ಶೆಟ್ಟಿ ಹಾಗೂ ಎಡ್ನಾ ಜತ್ತನ್ನ ಮತ್ತು ನೀತಾ ಮುರಲಿ ಅವರಿಗೆ ಆಭರಣಗಳನ್ನು ಹಸ್ತಾಂತರಿಸಿದರು.

ಎಲ್ಲಾ ವಯೋಮಾನದವರಿಗೂ, ಎಲ್ಲಾ ಸಂದರ್ಭಗಳಿಗೂ ಸಲ್ಲುವ ಅತ್ಯಾಧುನಿಕ ಹಾಗೂ ವೈವಿಧ್ಯಮಯ ವಜ್ರಾಭರಣಗಳ ಪ್ರದರ್ಶನ ‘ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್’ನಲ್ಲಿ ಇಂದಿನಿಂದ ಜೂ.30ರವರೆಗೆ ನಡೆಯಲಿದೆ. ನುರಿತ ಕುಶಲಕರ್ಮಿ ಗಳಿಂದ ಕಲಾತ್ಮಕವಾಗಿ ತಯಾರಾದ ಈ ಆಭರಣಗಳು, ಅವರ ಕೌಶಲ್ಯಕ್ಕೆ, ಪ್ರತಿಭೆಗೆ ಸಾಕ್ಷಿಯಾಗಿವೆ. ಪ್ರದರ್ಶನದ ಸಂದರ್ಭದಲ್ಲಿ ಮಾಡುವ ಖರೀದಿಯ ಮೇಲೆ ಶೇ.5ರಿಂದ 20ರವರೆಗೆ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಪ್ರದರ್ಶನದಲ್ಲಿ ಸಬ್‌ಬ್ರಾಂಡ್‌ಗಳಾದ ಮೈನ್ ಡೈಮಂಡ್ ಆಭರಣ, ಬ್ರೈಡಲ್ ಸಂಗ್ರಹ, ಸಾಲಿಟೇರ್, ಎರಾ, ಪ್ರೆಸಿಯಾ, ಎಥಿನಿಕ್ಸ್, ಡಿವೈನ್, ಸ್ಟಾರ್‌ಲೆಟ್ ಅಲ್ಲದೇ ಪ್ರತಿದಿನ ಧರಿಸುವ, ಪುರುಷರ, ಪ್ಲಾಟಿನಂಗಳ ಸಂಗ್ರಹಗಳಿವೆ ಎಂದು ‘ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ಸ್’ ಪ್ರಕಟನೆಯಲ್ಲಿ ತಿಳಿಸಿದೆ.

ಉಡುಪಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಸ್ಟೋರ್ ಹೆಡ್ ಹಫೀಝ್ ರಹ್ಮಾನ್ ಸ್ವಾಗತಿಸಿ, ವಂದಿಸಿದರು. ಅಸ್ಸೆಟ್ ಹೆಡ್ ಹೇಮಂತ್ ಉಪಸ್ಥಿತರಿದ್ದರು. ನತಾಝ್ ಅಲಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News