ಎಸ್ಸೆಸ್ಸೆಫ್ ಮಾಲೆಂಗ್ರಿ ಶಾಖೆ ವತಿಯಿಂದ ರಮಝಾನ್ ಕಿಟ್ ವಿತರಣೆ
Update: 2016-06-17 12:41 IST
ಕಡಬ, ಜೂ.17: ಕಾಣಿಯೂರು ಪುಣ್ಚತ್ತಾರು ಸಮೀಪದ ಮಾಲೆಂಗ್ರಿ ಎಸ್ಸೆಸ್ಸೆಫ್ ಶಾಖೆ ವತಿಯಿಂದ ರಮಝಾನ್ ಕಿಟ್ ವಿತರಣಾ ಕಾರ್ಯಕ್ರಮವು ಮಾಲೆಂಗ್ರಿ ನೂರುಲ್ ಇಸ್ಲಾಂ ಮದರಸದ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಸೀದಿಯ ಸದರ್ ಉಸ್ತಾದ್ ಸಿದ್ದೀಕ್ ಸಖಾಫಿ, ಎಸ್ಸೆಸ್ಸೆಫ್ ಮಾಲೆಂಗ್ರಿ ಶಾಖಾ ಅಧ್ಯಕ್ಷ ಹನೀಫ್ ಬಿ.ಎಂ., ಸ್ವಲಾತ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಆಲಂಬಾಡಿ, ಪ್ರಮುಖರಾದ ಅಬೂಬಕರ್ ಮೊದಲಾದವರು ಉಪಸ್ಥಿತರಿದ್ದರು.