ಉದನೆ: ಸೈಂಟ್ ಆಂಟನೀಸ್ ಪ್ರೌಢಶಾಲಾ ಮಂತ್ರಿಮಂಡಲ ರಚನೆ
Update: 2016-06-17 12:52 IST
ಕಡಬ, ಜೂ.17: ನೆಲ್ಯಾಡಿ ಸಮೀಪದ ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆಯ 2016-17ನೆ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಮಂತ್ರಿಮಂಡಲದ ಚುನಾವಣೆಯು ಗುರುವಾರ ನಡೆಯಿತು.
ವಿದ್ಯಾರ್ಥಿ ನಾಯಕನಾಗಿ ಪ್ರಸನ್ನ ಕುಮಾರ್, ಉಪನಾಯಕನಾಗಿ ಜಿನೀಶ್ ಆಯ್ಕೆಯಾದರು. ಸಾಂಸ್ಕೃತಿಕ ಮಂತ್ರಿಯಾಗಿ ಕುಣ ದಿವ್ಯಾ, ಕ್ರೀಡಾ ಮಂತ್ರಿಯಾಗಿ ರಂಜನ್, ಅಕ್ಷರ ದಾಸೋಹ ಮಂತ್ರಿಯಾಗಿ ಪ್ರಶಾಂತ್, ಸ್ವಚ್ಛತಾ ಮಂತ್ರಿಯಾಗಿ ಕುಣ ಯಕ್ಷಿತಾ ಇವರನ್ನು ಆಯ್ಕೆ ಮಾಡಲಾಯಿತು.
ಚುನಾವಣೆಯು ಶಾಲಾ ಮುಖ್ಯಗುರು ಕೆ.ಎಸ್.ಸೆಬಾಸ್ಟಿಯನ್ರ ಮಾರ್ಗದರ್ಶನದಂತೆ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಅಧ್ಯಾಪಕ ಸತ್ಯನಾರಾಯಣ ಕರ್ತವ್ಯ ನಿರ್ವಹಿಸಿದರು. ಹಿರಿಯ ಶಿಕ್ಷಕ ಶ್ರೀಧರ ಗೌಡ ಬಿ., ಬಾಲಕೃಷ್ಣ ಗೌಡ ಎಂ.,ರೂಪಾ ಹಾಗೂ ದಿವಾಕರ್ ಸಹಕರಿಸಿದರು.