ಧೋತಿ-ಕುರ್ತಾ,ಸೀರೆ ಘಟಿಕೋತ್ಸವದ ವಸ್ತ್ರಸಂಹಿತೆಯಾಗಲಿ:ಎಬಿವಿಪಿ ಆಗ್ರಹ
Update: 2016-06-17 18:54 IST
ರಾಂಚಿ,ಜೂ.17: ಜುಲೈ 5ರಂದು ನಡೆಯಲಿರುವ ರಾಂಚಿ ವಿವಿಯ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಯಾವ ಉಡುಪುಗಳನ್ನು ಧರಿಸಬೇಕು ಎಂಬ ಬಗ್ಗೆ ಅಧಿಕಾರಿಗಳು ಮತ್ತು ಎಬಿವಿಪಿ ನಡೆಯುತ್ತಿರುವ ಹಣಾಹಣಿಯ ನಡುವೆ ಪದವಿ ಪಡೆಯಲಿರುವ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ.
ಘಟಿಕೋತ್ಸವಕ್ಕೆ ವಸ್ತ್ರಸಂಹಿತೆಯಾಗಿ ವಿದ್ಯಾರ್ಥಿಗಳಿಗೆ ಧೋತಿ-ಕುರ್ತಾ ಮತ್ತು ವಿದ್ಯಾರ್ಥಿನಿಯರಿಗೆ ಸೀರೆಯನ್ನು ನಿಗದಿಗೊಳಿಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ. ಸಾಂಪ್ರದಾಯಕ ಗೌನುಗಳು ಬ್ರಿಟಿಷ್‌ರಿಂದ ಆಮದಾದ ಸಂಸ್ಕೃತಿಯಾಗಿದು,್ದ ಅದನ್ನು ನಿಲ್ಲಿಸಬೇಕು ಎನ್ನುವುದು ಅದರ ವಾದ. ಆದರೆ ವಿವಿ ಆಡಳಿತವು ಎಲ್ಲ ವಿದ್ಯಾರ್ಥಿಗಳು ಗೌನು ಧರಿಸುವುದನ್ನು ಕಡ್ಡಾಯಗೊಳಿಸಿದೆ.
ಘಟಿಕೋತ್ಸವ ದಿನದಂದು ಗೌನುಗಳ ಬಳಕೆಯ ವಿರುದ್ಧ ಪ್ರತಿಭಟಿಸಲು ಮತ್ತು ಕಲಾಪಗಳಿಗೆ ತಡೆಯೊಡ್ಡಲು ಎಬಿವಿಪಿ ನಿರ್ಧರಿಸಿದೆ.