×
Ad

ದೇವಾಲಯದ ಸಂಪರ್ಕ ರಸ್ತೆಗೆ ತಡೆ: ತೆರವಿಗೆ ಸಾರ್ವಜನಿಕರಿಂದ ಮನವಿ

Update: 2016-06-17 18:56 IST

ಪುತ್ತೂರು, ಜೂ. 17: ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವಿಷ್ಣುಮೂರ್ತಿ ದೇವಾಲಯದ ಸಂಪರ್ಕ ರಸ್ತೆಗೆ ದೇವಾಲಯದ ಗೇಟಿನ ಮುಂದೆ ಸ್ಥಳೀಯರೊಬ್ಬರು ಕಂದಕ ನಿರ್ಮಿಸಿ ತಡೆಯೊಡ್ಡಿರುವ ಕುರಿತು ಹಾಗೂ ಮುಚ್ಚಿರುವ ರಸ್ತೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ದೇವಾಲಯದ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಕಳೆದ ಎಪ್ರಿಲ್‌ನಲ್ಲಿ ನವೀಕರಣಗೊಂಡು ಜೀರ್ಣೋದ್ಧಾರಗೊಂಡಿರುವ ವಿಷ್ಣಮೂರ್ತಿ ದೇವಾಲಯಕ್ಕೆ ಹೋಗಲು ಇರುವ ಏಕೈಕ ಮಾರ್ಗ ಇದಾಗಿದ್ದು, ಕಳೆದ ಸೋಮವಾರ ಸ್ಥಳೀಯ ನಿವಾಸಿಯೊಬ್ಬರು ದೇವಾಲಯದ ಗೇಟಿಗೆ ಬೀಗ ಹಾಕಿ, ಗೇಟಿನ ಮುಂಬಾಗ ದೊಡ್ಡ ಕಂದಕ ನಿರ್ಮಿಸಿದ್ದಾರೆ. ಇದರಿಂದಾಗಿ ದೇವಾಲಯಕ್ಕೆ ಸಂಪರ್ಕ ರಸ್ತೆಯೇ ಇಲ್ಲವಾಗಿದೆ. ದೈನಂದಿನ ಪೂಜಾ ಕಾರ್ಯ ಮಾಡಲು ಅರ್ಚಕರಿಗೂ ಹೋಗಲು ತೊಂದರೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಿರುವ ಸ್ಥಳೀಯರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಮುಚ್ಚಿರುವ ರಸ್ತೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News