ಕಾರ್ಕಳ: ಕಾರುಗಳಿಗೆ ಲಾರಿ ಢಿಕ್ಕಿ; ನಾಲ್ವರಿಗೆ ಗಾಯ
Update: 2016-06-17 20:50 IST
ಕಾರ್ಕಳ, ಜೂ.17: ಲಾರಿ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಗಾಯಗೊಂಡ ಘಟನೆ ಮಾಳ ಎಸ್ಕೆ ಬಾರ್ಡರ್‌ನಲ್ಲಿ ಶುಕ್ರವಾರ ನಡೆದಿದೆ.
ಶೃಂಗೇರಿ ಕಡೆ ತೆರಳುತ್ತಿದ್ದ ಲಾರಿ, ಶೃಂಗೇರಿಯಿಂದ ವಾಪಸ್ಸಾಗುತ್ತಿದ್ದ ಎರಡು ಆಲ್ಟೊ ಕಾರುಗಳಿಗೆ ಢಿಕ್ಕಿ ಹೊಡೆದಿದೆ. ಮೂಡುಬಿದಿರೆ ಸಮೀಪದ ಶಿರ್ತಾಡಿಯ ಕುಟುಂಬವೊಂದು ಎರಡು ಆಲ್ಟೊ ಕಾರಿನಲ್ಲಿ ಶೃಂಗೇರಿ ತೆರಳಿದ್ದು, ಅಲ್ಲಿಂದ ದೇವರ ದರ್ಶನ ಮುಗಿಸಿಕೊಂಡು ಊರಿಗೆ ವಾಪಸ್ಸಾಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
ಆಲ್ಟೊ ಕಾರಿನಲ್ಲಿದ್ದ ಯಶೋಧ(59) ಗಂಭೀರವಾಗಿ ಗಾಯಗೊಂಡಿದ್ದರೆ, ಶಿವಾನಂದ (38), ಸೌಮ್ಯಾ (22) ಮತ್ತು ವಿಘ್ನೇಶ್ (22) ಎಂಬವರಿಗೆ ಅಲ್ಪ ಪ್ರಮಾಣದಲ್ಲಿ ಗಾಯಗಳಾಗಿವೆ. ಇನ್ನೊಂದು ಆಲ್ಟೋ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.