×
Ad

ಜೂ.18ರಂದು ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ರಮಝಾನ್ ಪ್ರವಚನ

Update: 2016-06-17 23:22 IST

ಮಂಗಳೂರು, ಜೂ.17: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ (ರಿ) ಕುದ್ರೋಳಿ ಘಟಕದ ವತಿಯಿಂದ ಜೂ.18ರಂದು ಕುದ್ರೋಳಿ ಜಾಮಿಯಾ ಮಸೀದಿ (ಜೋಡುಪಳ್ಳಿ)ಯಲ್ಲಿ ಝುಹರ್ ನಮಾಝಿನ ಬಳಿಕ ರಮಝಾನ್ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಖ್ಯಾತ ವಿದ್ವಾಂಸ ಶೇಕ್ ಅಬ್ದುರ್ರಹೀಂ ಸಗ್ರಿ ‘ಬದ್ರ್ ಸಂದೇಶ‘ ಎಂಬ ವಿಷಯದಲ್ಲಿ ಉರ್ದು ಭಾಷೆಯಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಎಸ್ಕೆಎಸ್ಸೆಂ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News