×
Ad

ಮೀನುಗಾರರಿಗೆ ಬಯೋಮೆಟ್ರಿಕ್: ಜೂ.30 ಕೊನೆಯ ದಿನ

Update: 2016-06-17 23:49 IST

ಉಡುಪಿ, ಜೂ.17: ದೋಣಿಗಳಲ್ಲಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಆದ್ದರಿಂದ ಈವರೆಗೆ ಬಯೋಮೆಟ್ರಿಕ್ ಕಾರ್ಡ್ ಮಾಡಿಸದ ಮೀನುಗಾರರು ಬಯೋಮೆಟ್ರಿಕ್ ಕಾರ್ಡ್ ಪಡೆಯುವ ಕಾರ್ಯಕ್ರಮವನ್ನು ಜೂ.20ರಿಂದ 30ರವರೆಗೆ ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಆಯೋಜಿಸಲಾಗಿದೆ.

ಬಯೋಮೆಟ್ರಿಕ್ ಮಾಡಿಸಲು ಇದು ಕೊನೆಯ ಅವಕಾಶವಾಗಿದೆ. ಮೀನುಗಾರರ ಸಂಘ-ಸಂಸ್ಥೆಗಳು ತಮ್ಮ ಸದಸ್ಯರಲ್ಲಿ ವ್ಯಾಪಕ ಪ್ರಚಾರ ನೀಡಿ ಬಯೋಮೆಟ್ರಿಕ್ ಕ್ಯಾಂಪ್ ಆಯೋಜಿಸಿರುವ ಬಗ್ಗೆ ತಿಳಿಸುವಂತೆ ಹಾಗೂ ಬಯೋಮೆಟ್ರಿಕ್ ಕ್ಯಾಂಪ್‌ನ್ನು ಮಂಗಳೂರು ತಾಲೂಕಿನ ಉಳ್ಳಾಲ, ಬೈಕಂಪಾಡಿ ಮತ್ತು ಮಂಗಳೂರು ಮೀನುಗಾರಿಕೆ ಬಂದರಿನ ಮಾಹಿತಿ ಕೇಂದ್ರ, ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿ, ಮಲ್ಪೆ, ಹಂಗಾರಕಟ್ಟೆ ಹಾಗೂ ಕುಂದಾಪುರ ತಾಲೂಕಿನ ಗಂಗೊಳ್ಳಿ, ಉಪ್ಪುಂದದಲ್ಲಿ ಸ್ಥಳ ನಿಗದಿಪಡಿಸಲಾಗಿದೆ ಎಂದು ಮೀನುಗಾರಿಕಾ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News