×
Ad

ಕೊಲ್ಯ: ರೈಲಿನಡಿಗೆ ಬಿದ್ದು ನವವಿವಾಹಿತ ಆತ್ಮಹತ್ಯೆ

Update: 2016-06-18 18:49 IST

ಉಳ್ಳಾಲ,ಜೂ.18: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಜಾಯ್‌ಲೆಂಡ್ ಸ್ಕೂಲ್ ರೈಲ್ವೇ ಕ್ರಾಸಿಂಗ್ ಬಳಿ ಅಂಗವಿಕಲ ನವವಿವಾಹಿತನೋರ್ವ ರೈಲಿನಡಿಗೆ ಬಿದ್ದು ಆತ್ಮಹತ್ಯೆಗೈದ ದುರ್ಘಟನೆ ಶನಿವಾರ ಸಾಯಂಕಾಲ ನಡೆದಿದೆ.

 ಕೊಲ್ಯ ಸಾರಸ್ವತ ಕೊಲನಿಯ ವೇದಾಮೂಲ್ಯ ಎಂಬವರ ಪುತ್ರ ಪ್ರಶಾಂತ್(38) ಆತ್ಮಹತ್ಯೆಗೈದ ವ್ಯಕ್ತಿ. ಪ್ರಶಾಂತ್ ಒಂದು ತಿಂಗಳ ಹಿಂದಷ್ಟೆ ಮದುವೆಯಾಗಿದ್ದು ಸ್ಥಳೀಯ ಕೋ-ಓಪರೇಟಿವ್ ಸೊಸೈಟಿಯೊಂದರಲ್ಲಿ ಪಿಗ್ಮಿ ಕಲೆಕ್ಟರ್ ಆಗಿದ್ದರೆನ್ನಲಾಗಿದೆ. ಪ್ರಶಾಂತ್ ಅವರ ಕಾಲೊಂದು ಊನವಾಗಿದ್ದು ಹುಟ್ಟು ಅಂಗವಿಕಲರಾಗಿದ್ದರು. ಮಾನಸಿಕವಾಗಿ ಖಿನ್ನರಾಗಿದ್ದು ಶುಕ್ರವಾರ ರಾತ್ರಿಯೂ ಇದೇ ಸ್ಥಳದಲ್ಲಿ ರೈಲಿನಡಿಗೆ ತಲೆಕೊಟ್ಟು ಸಾಯುವುದಕ್ಕೆ ಪ್ರಯತ್ನಿಸಿದನ್ನು ಸ್ಥಳೀಯರು ಕಂಡಿದ್ದಾರೆ.ರೈಲು ಢಿಕ್ಕಿ ಹೊಡೆದ ಪರಿಣಾಮ ದೇಹವು ಛಿಧ್ರ ಛಿಧ್ರವಾಗಿದ್ದು ರೈಲ್ವೇ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News