×
Ad

ಶಿಕ್ಷಕಿಯ ವರ್ಗಾವಣೆಯನ್ನು ಖಂಡಿಸಿ ಶಾಲೆಗೆ ಬೀಗ ಜಡಿದ ಪೋಷಕರು

Update: 2016-06-18 20:30 IST

ಬೆಳ್ತಂಗಡಿ,ಜೂ.18: ಕ್ಷುಲ್ಲಕ ಕಾರಣವನ್ನು ನೀಡಿ ಶಿಕ್ಷಕರನ್ನು ಬೇರೆ ಕಡೆ ವರ್ಗಾವಣೆ ಮಾಡಲು ಯತ್ನಿಸಿದ ಶಿಕ್ಷಣ ಇಲಾಖೆಯ ಕ್ರಮವನ್ನು ಖಂಡಿಸಿ ಪೋಷಕರೇ ಶಾಲೆಗೆ ಬೀಗ ಜಡಿಯಲು ಯತ್ನಿಸಿದ ಘಟನೆ ಮಚ್ಚಿನ ಸರಕಾರಿ ಫ್ರೌಢಶಾಲೆಯಲ್ಲಿ ನಡೆದಿದೆ.

  ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿರುವ ಮಚ್ಚಿನ ಸರಕಾರಿ ಫ್ರೌಢಶಾಲೆಯಲ್ಲಿ ಡ್ರಾಯಿಂಗ್ ಶಿಕ್ಷಕಿಯಾಗಿದ್ದ ರತ್ನವ್ವ ಎಂಬವರನ್ನು ಮುಖ್ಯ ಶಿಕ್ಷಕರಿಗೆ ಗೌರವ ನೀಡುತ್ತಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ನಾವೂರು ಸರಕಾರಿ ಶಾಲೆಗೆ ವರ್ಗಾವಣೆ ಮಾಡಿದ್ದರು. ಈ ಬಗ್ಗೆ ಪೋಷಕರು ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದೀಗ ಶಾಲೆಯ ಆಂಗ್ಲ ಶಿಕ್ಷಕಿಯನ್ನು ಕೂಡಾ ಬೇರೆ ಕಡೆ ನಿಯೋಜನೆ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ನೀಡಿದ್ದು, ಶಿಕ್ಷಣಾಧಿಕಾರಿಗಳು ನೀಡಿದ ಸೂಚನೆಗೆ ಪೋಷಕರು ಖಂಡಿಸಿ ಶನಿವಾರ ಶಾಲೆಯಲ್ಲಿ ಜಮಾಯಿಸಿದ್ದರು.

 ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಜಂ ನಾಯ್ಕ ಇತರ ಶಿಕ್ಷಕರ ನಡುವೆ ಭೇಧಭಾವ ಮಾಡುತ್ತಿದ್ದು, ಶಿಕ್ಷಕರನ್ನು ವರ್ಗಾವಣೆ ಮಾಡಲು ಕಾರಣವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕರ ನಡುವೆ ಸಮನ್ವಯತೆ ಇಲ್ಲವಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮುಖ್ಯ ಶಿಕ್ಷಕರು ಪಿತೂರಿ ನಡೆಸಿ ಇತರ ಶಿಕ್ಷಕರ ವರ್ಗಾವಣೆಗೆ ಕಾರಣವಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ನಿಯೋಜನೆ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಶನಿವಾರ ಪೋಷಕರು ಶಾಲೆಯಲ್ಲಿ ಜಮಾಯಿಸಿದ್ದು, ಬೀಗ ಜಡಿಯುವ ಬೆದರಿಕೆಯನ್ನು ಹಾಕಿದ್ದಾರೆ. ಸೋಮವಾರ ನಿಯೋಜನೆ ವಾಪಸು ಪಡೆಯದಿದ್ದಲ್ಲಿ ಶಾಲೆಗೆ ಬೀಗ ಜಡಿಯುವುದಾಗಿ ಪೋಷಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News