ಮಂಗಳೂರು: ಯುವಕ ನೀರು ಪಾಲು
Update: 2016-06-18 22:35 IST
ಮಂಗಳೂರು, ಜೂ. 18: ಮೀನಿಗೆ ಗಾಳ ಹಾಕುತ್ತಿದ್ದ ವ್ಯಕ್ತಿಯೋರ್ವ ಕಾಲು ಜಾರಿ ಬಿದ್ದು ನೀರುಪಾಲಾಗಿರುವ ಘಟನೆ ಸುಭಾಶ್‌ನಗರ ಬಳಿ ಇಂದು ನಡೆದಿದೆ.
ನೀರುಪಾಲಾಗಿರುವ ಯವಕನನ್ನು ವಾಮಂಜೂರು ಅಂಬೇಡ್ಕರ್ ಕಾಲನಿಯ ಶಿವ ಎಂಬವರ ಪುತ್ರ ಅನಿಲ್(36) ಎಂದು ಗುರುತಿಸಲಾಗಿದೆ.
ಅನಿಲ್ ಅವರು ಸುಭಾಶ್‌ನಗರ ರೈಲ್ವೆ ಟ್ರಾಕ್ ಬಳಿಯಲ್ಲಿ ಹಳ್ಳವೊಂದರಲ್ಲಿ ಮೀನಿಗೆ ಗಾಳ ಹಾಕುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದು, ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.