×
Ad

ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪ್ರಕರಣ

Update: 2016-06-18 23:47 IST

ಕಾಸರಗೋಡು, ಜೂ.18: ಪಿಲಿಕ್ಕೋಡು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚಿಸಿದ ಘಟನೆಗೆ ಸಂಬಂಧಪಟ್ಟಂತೆ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿಯನ್ನು ನೀಲೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಬ್ಯಾಂಕ್ ಮ್ಯಾನೇಜರ್ ಎಂ. ವಿ. ಶರತ್‌ಚಂದ್ರ (42) ಮತ್ತು ಅಪ್ರೈಸರ್ ಪಿ. ವಿ. ಕುಂಞರಾಮನ್ (55)ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ .ಪ್ರಾಥಮಿಕ ತಪಾಸಣೆಯಿಂದ ಬ್ಯಾಂಕ್‌ನಲ್ಲಿ 80 ಲಕ್ಷ ರೂ. ಗೂ ಅಧಿಕ ವಂಚನೆ ನಡೆದಿದೆ. 29 ಮಂದಿ ನಕಲಿ ಚಿನ್ನಾಭರಣ ಅಡವಿಟ್ಟಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ. ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ವಂಚನೆ ಪ್ರಕರಣದ ಹಿನ್ನ್ನೆಲೆ ಯಲ್ಲಿ ಜಿಲ್ಲೆಯಎಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ ಅಡವಿಟ್ಟಿರುವ ಚಿನ್ನಾಭರಣಗಳನ್ನು ತಪಾಸಣೆ ನಡೆಸಲಾಗುತ್ತಿದ್ದು, ಪಿಲಿಕ್ಕೋಡು ಬ್ಯಾಂಕ್‌ನಲ್ಲೂ ವಂಚನೆ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News