ಸುಳ್ಯ ರೋಟರಿ ಕ್ಲಬ್: ಜುಲೈ 6ರಂದು ಪದಗ್ರಹಣ
Update: 2016-06-18 23:51 IST
ಸುಳ್ಯ, ಜೂ.18: ಸುಳ್ಯ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಟಿ.ಗಿರಿಜಾಶಂಕರ, ಕಾರ್ಯದರ್ಶಿಯಾಗಿ ಡಾ.ಎಚ್.ಗುರುರಾಜ್ ಆಯ್ಕೆಯಾಗಿದ್ದು, ಜುಲೈ 6ರಂದು ಪದಗ್ರಹಣ ಸಮಾರಂಭ ನಡೆಯಲಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಗಿರಿಜಾಶಂಕರ, ಪುತ್ತೂರು ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಡಾ.ಅಶೋಕ್ ಪಡಿವಾಳ್ ಪದಗ್ರಹಣ ನಡೆಸಿಕೊಡಲಿದ್ದು, ಡಾ.ದೇವದಾಸ್ ರೈ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಿದ್ದಾರೆ. ವಲಯ ಅಸಿಸ್ಟೆಂಟ್ ಗವರ್ನರ್ ಶಾಮಸುಂದರ ರೈ, ರೆನಲ್ ಲೆಫ್ಟಿನೆಂಟ್ ಎಂ.ಎಸ್.ಬಾಪೂ ಸಾಹೇಬ್ ಅತಿಥಿಗಳಾಗಿ ಭಾಗಹಿಸಲಿದ್ದಾರೆ ಎಂದರು.ರೋಟರಿ ಕ್ಲಬ್ ಅಧ್ಯಕ್ಷ ಬೆಳ್ಯಪ್ಪ ಗೌಡ, ಜೆ.ಕೆ.ರೈ, ಎಂ.ಎಸ್.ಬಾಪೂ ಸಾಹೇಬ್, ನಿಯೋಜಿತ ಕಾರ್ಯದರ್ಶಿ ಡಾ.ಗುರುರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.