ಸಮಸ್ತ ಪಬ್ಲಿಕ್ ಪರೀಕ್ಷೆ: ದ.ಕ. ಜಿಲ್ಲೆಗೆ 96ಶೇ. ಫಲಿತಾಂಶ
ಮಂಗಳೂರು, ಜೂ.19: ಭಾರತದ ಪ್ರತಿಷ್ಠಿತ ಇಸ್ಲಾಮಿಕ್ ಶಿಕ್ಷಣ ಮಂಡಳಿ ಸಮಸ್ತ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಅಧೀನದಲ್ಲಿ ದೇಶವಿದೇಶಗಳಲ್ಲಿ ನಡೆದ ಮದರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5ನೆ ತರಗತಿಯಲ್ಲಿ ಪರೀಕ್ಷೆ ಬರೆದ 4,047 ವಿದ್ಯಾರ್ಥಿಗಳಲ್ಲಿ 3,763 ಮಂದಿ, 7ನೆ ತರಗತಿಯಲ್ಲಿ 3,166 ವಿದ್ಯಾರ್ಥಿಗಳಲ್ಲಿ 3,166 ಮತ್ತು ಹತ್ತನೆ ತರಗತಿಯಲ್ಲಿ ಪರೀಕ್ಷೆ ಬರೆದ 460 ವಿದ್ಯಾರ್ಥಿಗಳ ಪೈಕಿ 442 ಮಂದಿ ಹಾಗೂ ಪ್ಲಸ್ ಟುನಲ್ಲಿ 33ರಲ್ಲಿ 32 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಜಿಲ್ಲೆಗೆ 96ಶೇ. ಫಲಿತಾಂಶ ಬಂದಿದೆ.
5ನೆ ತರಗತಿಯಲ್ಲಿ ಕರಾಯ ಮದರಸದ ಆದಿಲ್ ಶಹಾನಿ, 7ನೆ ತರಗತಿಯಲ್ಲಿ ಮನಮಜಲ್ ಮದರಸದ ಶಂನ, 10ನೆ ತರಗತಿಯಲ್ಲಿ ಕರಾಯ ಮದರಸದ ಖಲಂದರ್ ಹಾಗೂ ಪ್ಲಸ್ ಟು ತರಗತಿಯಲ್ಲಿ ಖದೀಜತ್ ಜಝೀಲ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ ಎಂದು ದ.ಕ. ಜಿಲ್ಲಾ ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಐ. ಮೊಯ್ದಿನಬ್ಬ ಹಾಜಿ ಹಾಗೂ ಜಿಲ್ಲಾ ಜಮೀಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಉಮ್ಮರ್ ದಾರಿಮಿ ಪಟ್ಟೋರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.