×
Ad

ಹೈಟೆಕ್ ಕಾರು ಕದಿಯುವ ಈ ಕಳ್ಳರೂ ಹೈಟೆಕ್!

Update: 2016-06-19 18:17 IST

ಹೊಸದಿಲ್ಲಿ: ನಿಮ್ಮ ಕಾರಿಗೆ ನೀವು ಎಲೆಕ್ಟ್ರಾನಿಕ್ ಲಾಕಿಂಗ್ ಸಾಧನ ಬಳಸಿದ್ದೇವೆ ಎಂಬ ನಿಶ್ಚಿಂತೆಯಿಂದ ಇದ್ದರೆ, ನಿಮ್ಮ ಯೋಚನೆ ತಪ್ಪು. ಇದನ್ನೂ ಭೇದಿಸುವ ಹೈಟೆಕ್ ವಿಧಾನವನ್ನು ಈ ಮೀರಠ್ ಕಾರು ಕಳ್ಳರು ಕಂಡುಹಿಡಿದಿದ್ದಾರೆ. ದಕ್ಷಿಣ ದೆಹಲಿಯ ಕಾಲೋನಿಗಳಲ್ಲಿದ್ದ ಮೂವರು ಕಾರುಗಳ್ಳರನ್ನು ಪೊಲೀಸರು ಹಿಡಿದು ವಿಚಾರಣೆಗೆ ಗುರಿಪಡಿಸಿದಾಗ ಈ ಹೈಟೆಕ್ ದಂಧೆ ಬೆಳಕಿಗೆ ಬಂದಿದೆ.


ಮತ್ಲಬ್, ಅಬ್ದುಲ್ ಸಾಜಿದ್ ಹಾಗೂ ಹುಕುಂ ಸಿಂಗ್ ಅವರು ಮೀರಠ್ ಮೂಲದ ನವಾಬ್- ಗುಲ್ಫಮ್ ಗ್ಯಾಂಗ್‌ಗಾಗಿ ಕೆಲಸ ಮಾಡುತ್ತಿದ್ದರು. ಒಮ್ಮೆ ನವಾಬ್‌ಗೆ ಕೆಲ ನಿರ್ದಿಷ್ಟ ಬ್ರಾಂಡ್‌ಗಳ ಕಾರುಗಳಿಗಾಗಿ ಬೇಡಿಕೆ ಬಂದಾಗ, ವಿವಿಧ ನಕಲಿ ಎಂಜಿನ್ ನಿಯಂತ್ರಣ ಮಾಡ್ಯೂಲ್ (ಇಸಿಎಂ) ಚಿಪ್‌ಗಳೊಂದಿಗೆ ದೆಹಲಿಗೆ ಬರುತ್ತಿದ್ದ. ಈ ಗ್ಯಾಂಗ್ ಕಾರುಗಳನ್ನು ಪತ್ತೆ ಮಾಡಿ ಇಸಿಎಂ ಸಹಾಯದಿಂದ ಅಂಥ ಕಾರುಗಳನ್ನು ಚಾಲನೆ ಮಾಡಿಕೊಂಡು ಹೋಗುತ್ತಿತ್ತು. ಕಾರಿನ ಸೆಕ್ಯುರಿಟಿ ವ್ಯವಸ್ಥೆಯನ್ನು ಭೇದಿಸಿ, ನಕಲಿ ಚಿಪ್ ಬಳಸುವುದು ಇವರ ತಂತ್ರವಾಗಿತ್ತು.


ದಕ್ಷಿಣ ದೆಹಲಿಯಿಂದ ಹಲವು ಕಾರು ಕಳ್ಳತನ ಆರೋಪಗಳು ಬಂದಾಗ ದೆಹಲಿ ಪೊಲೀಸರ ವಿಶೇಷ ತಂಡವನ್ನು ಪತ್ತೆಗಾಗಿ ನಿಯೋಜಿಸಲಾಯಿತು. ಡಿಸಿಪಿ ರಾಜೇಂದ್ರ ಸಿಂಗ್ ನೇತೃತ್ವದ ತಂಡಕ್ಕೆ ಇನ್‌ಸ್ಪೆಕ್ಟರ್ ಹೀರಾ ಲಾಲ್ ಅವರನ್ನೂ ಸೇರಿಸಲಾಗಿತ್ತು ಎಂದು ಡಿಸಿಪಿ ಈಶ್ವರ ಸಿಂಗ್ ಪ್ರಕಟಿಸಿದರು. ಮೀರಠ್‌ನಲ್ಲಿ ತಂಗಿ, ಅವರ ಅಡಗುದಾಣಗಳಿಂದಲೇ ಅವರನ್ನು ಬಂಧಿಸಲಾಯಿತು ಎಂದು ವಿವರ ನೀಡಿದರು.

ಗ್ಯಾಂಗ್ ಒಂದು ಬಾರಿ ಗ್ಯಾಂಗ್ ಎಲೆಕ್ಟ್ರಾನಿಕ್ ಚಿಪ್ ಬದಲಾಯಿಸಿದ ಬಳಿಕ, ಮಾಸ್ಟರ್ ಕೀ ಬಳಸಿಕೊಂಡು ಎಂಜಿನ್ ಇಗ್ನಿಶನ್ ಹೊಂದಾಣಿಕೆ ಮಾಡಲು ಅವಕಾಶವಿರುತ್ತದೆ. ಈ ಎಲ್ಲ ಕೆಲಸ ಕೇವಲ 15 ನಿಮಿಷದಲ್ಲಿ ಮುಗಿಯುತ್ತಿತ್ತು ಎಂದು ವಿವರಿಸಿದರು.
ಇವರು ಕಳೆದ ಎಂಟು ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 100ಕ್ಕೂ ಹೆಚ್ಚು ಕಾರುಗಳನ್ನು ಕದ್ದಿದ್ದು, ಪ್ರತಿ ಸದಸ್ಯ ಕದ್ದ ಕಾರಿಗೆ ಸಂಭಾವನೆಯಾಗಿ 10 ಸಾವಿರ ಪಡೆಯುತ್ತಿದ್ದರು. ಮತ್ಲಬ್ ಮೀರಠ್‌ನಲ್ಲಿ ಕಾರು ಮೆಕ್ಯಾನಿಕ್ ಆಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News