ಕಾಂಗ್ರೆಸ್‌ನ ಗ್ರಂಥಾಲಯಗಳ ಮೇಲೆ ಬಾಂಬ್ ದಾಳಿ
Update: 2016-06-19 18:55 IST
ಕಣ್ಣೂರು,ಜೂ.19: ಇಂದು ಬೆಳಗಿನ ಜಾವ ಅಪರಿಚಿತ ವ್ಯಕ್ತಿಗಳು ಇಲ್ಲಿಯ ಪೇರಲಶ್ಶೇರಿ ಮತ್ತು ಥನ್ನಡದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಎರಡು ಗ್ರಂಥಾಲಯಗಳ ಮೇಲೆ ನಾಡಬಾಂಬುಗಳನ್ನೆಸೆದಿದ್ದಾರೆ. ಕೆಲವು ಪೀಠೋಪಕರಣಗಳಿಗೆ ಹಾನಿಯಾಗಿದ್ದು, ಕಿಟಕಿಗಳ ಗಾಜುಗಳು ಹುಡಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ದಾಳಿಗಳ ಹಿಂದೆ ಸಿಪಿಎಂ ಕೈವಾಡವಿದೆ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ವಿ.ಎಂ.ಸುಧೀರನ್ ಅವರು ದಾಳಿಗಳನ್ನು ಖಂಡಿಸಿದ್ದಾರೆ.