×
Ad

ಪ್ರತಿಯೊಬ್ಬರಲ್ಲೂ ಓದುವ ಹವ್ಯಾಸವನ್ನು ಬೆಳೆಸಬೇಕಿದೆ: ಸಚಿವ ಇ.ಚಂದ್ರಶೇಖರನ್

Update: 2016-06-19 19:21 IST

ಕಾಸರಗೋಡು, ಜೂ.19: ಓದುವ ಅಭ್ಯಾಸ ಪ್ರತಿಯೊಬ್ಬರಲ್ಲಿ ಬೆಳೆಸಬೇಕಿದೆ. ಇಂದು ಹಲವು ಮಾಧ್ಯಮಗಳ ಪ್ರಭಾವದಿಂದ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಜ್ಞಾನ ಶಕ್ತಿ ಹೆಚ್ಚಿಸಬೇಕಿದೆ ಎಂದು ಕೇರಳ ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದ್ದಾರೆ.

ಅವರು ಪಿ.ಎನ್. ಪಣಿಕ್ಕರ್ ಸ್ಮರಣಾರ್ಥ ಜಿಲ್ಲಾಡಳಿತ ಮತ್ತು ಪಿ.ಎನ್. ಪಣಿಕ್ಕರ್ ಫೌಂಡೇಶನ್ ವತಿಯಿಂದ ಅಂಬಲತ್ತರದಲ್ಲಿ ನಡೆದ ವಾಚನಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಶಾಸಕ ಕೆ.ಕುಂಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖಾ ಉಪನಿರ್ದೇಶಕ ಪಿ.ಕೆ. ರಘುನಾಥ್, ಕೆ.ಎನ್. ಅರವಿಂದಾಕ್ಷನ್, ಪಿ.ಕೆ. ಕುಮಾರನ್, ಬಿ. ವಸಂತನ್, ಚಂದ್ರಶೇಖರನ್, ಪಿ.ಅನಿಲ್ ಕುಮಾರ್, ಕುಞಾಂಬು, ರವಿ ಪಿಲಿಕ್ಕೋಡುರನ್ನು ಅಭಿನಂದಿಸಲಾಯಿತು. ಕಾವ್ಯ ಸಂಧ್ಯಾ, ಸಾಂಸ್ಕೃತಿಕ ಭಾಷಣ, ಅಕ್ಷರ ವಿಸ್ಮಯ, ರಮಝಾನ್ ಸ್ನೇಹ ಸಂಗಮ ನಡೆಯಿತು. ಜಿಲ್ಲಾಧಿಕಾರಿ ಇ. ದೇವದಾಸನ್ ವಾಚನಾ ದಿನದ ಸಂದೇಶ ನೀಡಿದರು.

ಕೆ.ಪಿ. ಕುಂಞಿಕಣ್ಣನ್ ಪ್ರತಿಜ್ಞಾವಿಧಿ ಬೋಧಿಸಿದರು. ಕೇರಳ ಗ್ರಂಥಾಲಯ ಕಾರ್ಯದರ್ಶಿ ಪಿ.ಅಪ್ಪುಕುಟ್ಟನ್, ಪ್ರೊ.ಕಲ್ಪಟ್ಟ ನಾರಾಯಣನ್, ಕೆ.ಪಿ. ಜಯರಾಜನ್, ಮಾಧವನ್ ಪುರಚ್ಚೇರಿ, ಫಾ.ಜೋಸೆಫ್ ವಳ್ಳಿ ಕುನ್ನಲ್, ಶ್ರೀಧರನ್, ಅಬ್ದುರ್ರಶೀದ್, ಅಬ್ದುಲ್ ಖಾಸಿಮಿ ಸಂದೇಶ ನೀಡಿದರು. ಜಿಲ್ಲಾ ವಾರ್ತಾಧಿಕಾರಿ ಕೆ.ಟಿ. ಶೇಖರ್ ಸ್ವಾಗತಿಸಿ, ಕೆ.ವಿ. ರಾಘವನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News