×
Ad

ಶಿರಾಡಿ: ಗ್ಯಾಸ್ ಟ್ಯಾಂಕರ್ ಪಲ್ಟಿ

Update: 2016-06-19 21:32 IST

ಉಪ್ಪಿನಂಗಡಿ, ಜೂ.19: ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ರವಿವಾರ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಅನಿಲ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಗುಂಡ್ಯದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಈ ವೇಳೆ ಗ್ಯಾಸ್ ಟ್ಯಾಂಕ್ ವಾಹನದಿಂದ ಬೇರ್ಪಟ್ಟು ಬಿದ್ದಿದೆ. ಆದರೆ ಅನಿಲ ಸೋರಿಕೆಯಾಗದಿರುವುದರಿಂದ ಸಂಬಾವ್ಯ ಅಪಾಯ ತಪ್ಪಿದೆ.

ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನವನ್ನು ಸ್ಥಳಕ್ಕೆ ಕರೆಸಲಾಗಿತ್ತು. ಬಳಿಕ ಪಲ್ಟಿಯಾಗಿದ್ದ ಟ್ಯಾಂಕರನ್ನು ಕ್ರೇನ್ ಮೂಲಕ ಸರಿಪಡಿಸಿ ಇನ್ನೊಂದು ವಾಹನಕ್ಕೆ ಜೋಡಿಸಿ ಬೆಂಗಳೂರಿಗೆ ಕೊಂಡೊಯ್ಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News