ಅಮೆಮ್ಮಾರ್ ಬದ್ರಿಯಾ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟ
Update: 2016-06-19 23:48 IST
ಬಂಟ್ವಾಳ, ಜೂ.19: ಬದ್ರಿಯಾ ಜುಮ್ಮಾ ಮಸ್ಜಿದ್ ಅಮೆಮ್ಮಾರ್ನಲ್ಲಿ ಸುಮಾರು ಹದಿನೇಳು ವರ್ಷ ಮುದರ್ರಿಸ್ ಆಗಿ ಸೇವೆ ಸಲ್ಲಿಸಿ ನಿಧನರಾದ ಮರ್ಹೂಮ್ ಹಸೈನಾರ್ ಬಾಖವಿ ಸ್ಮರಣಾರ್ಥ ಅಮೆಮಾರ್ ಫ್ರೆಂಡ್ಸ್ ವತಿಯಿಂದ ಅಮೆಮಾರ್ ಮಸೀದಿಯಲ್ಲಿ ಇಫ್ತಾರ್ ಕೂಟ ನಡೆಯಿತು.
ಸಂಜೆ ಝಿಕ್ರ್ ಮತ್ತು ತಹ್ ಲೀಲ್ ಮಜ್ಲಿಸ್ ನಡೆಯಿತು. ಈ ಸಂದರ್ಭದಲ್ಲಿ ಮುಸ್ತಫಾ ಯಮಾನಿ ಮುದರ್ರಿಸ್ ಅಮೆಮಾರ್ ಮಸ್ಜಿದ್, ಬದ್ರಿಯಾ ಜುಮ್ಮಾ ಮಸ್ಜಿದ್ನ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ, ಅಮೆಮಾರ್ ಜಮಾತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ಮತ್ತಿತರರು ಉಪಸ್ಥಿತರಿದ್ದರು.