ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ‘ವರ್ಣ ಅಕ್ಷರ ತೇರು ಸಾವಿರದ ವಸಂತ’

Update: 2016-06-19 18:35 GMT

ಮಂಗಳೂರು, ಜೂ.19: ಚಿಕ್ಕ ಮಗಳೂರಿನ ಕೊಪ್ಪದ ವರ್ಣ ಪ್ರತಿ ಷ್ಠಾನ ಸಂಸ್ಥೆಯ ವತಿಯಿಂದ ‘ವರ್ಣ ಅಕ್ಷರ ತೇರು ಸಾವಿರದ ವಸಂತ’ ಎಂಬ ಒಂದು ದಿನದ ವಿಶಿಷ್ಟ ಕಾರ್ಯಾ ಗಾರ ನಗರದ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ಕಾಸಸ್ ಸಂಸ್ಥೆಯ ಸಹಯೋಗದೊಂದಿಗೆ ನಡೆಯಿತು.

ಎರಡು ವರ್ಷಗಳಿಂದ ಎಳೆಯರಲ್ಲಿ ಸಾಹಿತ್ಯಾಸಕ್ತಿ ಮೂಡಿಸುತ್ತಿರುವ ಕೊಪ್ಪದ ವರ್ಣ ಪ್ರತಿಷ್ಠಾನ ರಾಜ್ಯದ 5 ಜಿಲ್ಲೆಗಳ 15 ಶಾಲೆಗಳ ಒಂದು ಸಾವಿರ ವಿದ್ಯಾರ್ಥಿಗಳನ್ನು ತಲುಪಿದ ಪ್ರಯುಕ್ತ ನಗರದ ಕಾಸಸ್ ಸಹಯೋಗದಲ್ಲಿ ಮಂಗಳೂರಿನಲ್ಲಿ ಪ್ರಥಮ ಕಾರ್ಯಕ್ರಮ ಹಮ್ಮಿಕೊಂಡಿದೆ. ರವಿವಾರ ನಡೆದ ಕಾರ್ಯಕ್ರಮದಲ್ಲಿ 8 ಸರಕಾರಿ ಹಾಗೂ ವಸತಿ ಶಾಲೆಗಳ ಮಕ್ಕಳು ಪಾಲ್ಗೊಂಡರು.

‘‘ವರ್ಣ ಅಕ್ಷರ ತೇರು ಕಾರ್ಯಕ್ರಮದ ಮೂಲಕ ನಾವು ರಾಜ್ಯದ 15 ಶಾಲೆಗಳಿಗೆ ಸಾಹಿತ್ಯ ಪುಸ್ತಕ ಕೊಟ್ಟಿದ್ದೇವೆ. ಮೂರು ತಿಂಗಳಿಗೊಮ್ಮೆ ಈ ಪುಸ್ತಕವನ್ನು ಅದಲು ಬದಲು ಮಾಡಿ ಶಾಲೆಗಳಿಗೆ ನೀಡುತ್ತೇವೆ. ಇದರಿಂದ ಒಬ್ಬ ವಿದ್ಯಾ ರ್ಥಿಗೆ 200 ಪುಸ್ತಕಗಳು ದೊರೆಯುತ್ತವೆ. ಈ ರೀತಿ ಗ್ರಂಥಾಲಯ ಗಳಿಲ್ಲದ ಕಡೆಗಳಲ್ಲಿ 8ನೆ ತರಗತಿಯಿಂದ ಡಿಗ್ರಿವರೆಗಿನ ವಿದ್ಯಾರ್ಥಿಗಳಿಗೆ ಸಾಹಿತ್ಯ ಕೃತಿಗಳನ್ನು ನೀಡುತ್ತಿದ್ದೇವೆ. 2 ವರ್ಷಗಳಲ್ಲಿ ಕರ್ನಾಟಕದ 5 ಜಿಲ್ಲೆಗಳಲ್ಲಿ ಒಂದು ಸಾವಿರ ವಿದ್ಯಾರ್ಥಿಗಳನ್ನು ತಲು ಪಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ವರ್ಣ ಅಕ್ಷರ ತೇರು ಸಾವಿರದ ವಸಂತ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಕಾರ್ಯಾಗಾರದಲ್ಲಿ ಸಂವಾದ, ಹಾಡು, ಮಿಮಿಕ್ರಿ, ರಂಗ ಚಟುವಟಿಕೆ, ನಾಟಕ, ಕ್ರಾಫ್ಟ್ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಲಾಯಿತು’’ ಎಂದು ಪ್ರತಿಷ್ಠಾನದ ಸಂಸ್ಥಾಪಕ ವಿನೀತ್ ಸ್ವರೂಪ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಿಸದೆ, ಸರಕಾರಿ ಶಾಲೆಗಳ ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಗಾಗಿ ಕಲಾ ಮಾಧ್ಯಮವನ್ನು ಬಳಸಿಕೊಂಡು ಸಂಘಸಂಸ್ಥೆಗಳ ಸಹಕಾರ ದೊಂದಿಗೆ ಕೆಲವೊಮ್ಮೆ ತಮ್ಮ ವೈಯಕ್ತಿಕ ಆದಾಯದಲ್ಲಿ ವಿದ್ಯಾರ್ಥಿಗಳಿಗೆ ಶಿಬಿರ ನಡೆಸುತ್ತಿದೆ.

ಶಿಬಿರದಲ್ಲಿ ಪ್ರತಿಷ್ಠಾನದ ಇನ್ನೋರ್ವ ಸಂಸ್ಥಾಪಕ ಚೇತನ್ ಕೊಪ್ಪ, ಸಂಪನ್ಮೂಲ ವ್ಯಕ್ತಿಗಳಾಗಿ ಅಕ್ಷತಾ ಕುಡ್ಲ, ಅರ್ಜುನ, ರೂಪೇಶ್, ಮಂಜು, ಉಷಾ, ಪ್ರದೀಪ್, ಸಚಿನ್, ಬ್ರಿಜೇಶ್, ವಿಕಾಸ್ ಮೊದಲಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News