ಆತೂರು ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಇಫ್ತಾರ್ ಕೂಟ
ಉಪ್ಪಿನಂಗಡಿ, ಜೂ.20: ಎಸ್ಕೆಎಸ್ಸೆಸೆಫ್ ಆತೂರು ಶಾಖೆ ವತಿಯಿಂದ ಇಫ್ತಾರ್ ಕೂಟ ಹಾಗೂ ಮದ್ರಸ ವಿದ್ಯಾರ್ಥಿ ಸಂಘಟನೆ ಮಿಸ್ಬಾಹುಲ್ ಹುದಾ ವಿದ್ಯಾರ್ಥಿಗಳಿಂದ ರಮಝಾನ್ ಕಿಟ್ ವಿತರಣೆ ಕಾರ್ಯಕ್ರಮ ಜೂ.17ರಂದು ಆತೂರು ಬದ್ರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ಜರಗಿತು.
ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸೈಯ್ಯದ್ ಜುನೈದ್ ಜಿಫ್ರಿ ತಂಙಳ್ ಅಧ್ಯಕ್ಷತೆ ವಹಿಸಿ ದುಆ ನೆರವೇರಿಸಿದರು.
ಶ್ರೀರಂಗಪಟ್ಟಣ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಮುಹಮ್ಮದ್ ಮುಸ್ತಫಾ ಆತೂರು ರಮಝಾನ್, ಇಫ್ತಾರ್ ಕೂಟದ ಬಗ್ಗೆ ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಹನೀಫ್ ಪೈಝಿ ಇಸ್ಲಾಂನಲ್ಲಿ ದಾನ ಧರ್ಮದ ಮಹತ್ವದ ಬಗ್ಗೆ ಮಾತನಾಡಿದರು.
ಸಮಾರಂಭದಲ್ಲಿ ದಾರುನ್ನೂರು ಎಜುಕೇಶನ್ ಸೆಂಟರ್ ಕಾಶಿಪಟ್ಣ ಇದರ ದುಬೈ ಸಮಿತಿ ಸದಸ್ಯ ಎ.ಎಸ್. ಅಬ್ದುಲ್ ರಫೀಕ್, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಬಿ.ಕೆ. ಅಬ್ದುರ್ರಝಾಕ್, ಬದ್ರಿಯಾ ಆಂಗ್ಲ ಮಾದ್ಯಮ ಶಾಲಾ ಸಂಚಾಲಕ ಆದಂ, ಎಸ್.ವೈ.ಎಸ್. ಸಂಘಟನೆ ಉಪಾಧ್ಯಕ್ಷ ಅಬ್ದುಲ್ಲ ಹಾಜಿ ಕುಂಡಾಜೆ, ಜೊತೆ ಕಾರ್ಯದರ್ಶಿ ಎಚ್.ಆದಂ ಹೇಂತಾರ್, ಎಚ್. ಫಲೂಲುದ್ದೀನ್, ಅಬ್ದುಲ್ಲತೀಫ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಹಮೀದ್ ದಾರಿಮಿ ಸ್ವಾಗತಿಸಿ, ಎಸ್.ಕೆ. ಸಿದ್ದಿಕ್ ವಂದಿಸಿದರು. ರಫೀಕ್ ಗೋಳಿತ್ತಡಿ ಕಾರ್ಯಕ್ರಮ ನಿರೂಪಿಸಿದರು.