×
Ad

ಅಮೆರಿಕದ ಮುಸ್ಲಿಮರ ಮಾಹಿತಿ ಸಂಗ್ರಹಿಸಿ ಸುರಕ್ಷಾ ಅಧ್ಯಯನ ನಡೆಸಬೇಕು! : ಡೊನಾಲ್ಡ್ ಟ್ರಂಪ್

Update: 2016-06-20 14:13 IST

ವಾಷಿಂಗ್ಟನ್, ಜೂನ್ 20: ಸರಕಾರ ಮಸೀದಿಗಳನ್ನು ನಿರೀಕ್ಷಣೆಯಲ್ಲಿರಿಸಬೇಕೆಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ಧ ಹೋರಾಟದ ಭಾಗವಾಗಿ ದೇಶದಲ್ಲಿ ವಾಸಿಸುವ ಮುಸ್ಲಿಮರ ಕುರಿತು ಸುರಕ್ಷಾ ಅಧ್ಯಯನ ನಡೆಸುವ ಕುರಿತು ಆಳವಾಗಿ ಚಿಂತನೆ ನಡೆಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.ಸಿಬಿಎಸ್ ಚ್ಯಾನೆಲ್‌ಗೆ ಟೆಲಿಫೋನ್ ಮಾಡಿ ಈ ರೀತಿ ಹೇಳಿದ್ದು ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯ ಮಾಹಿತಿಗಳನ್ನು ಸಂಗ್ರಹಿಸಿ ಸುರಕ್ಷಾ ಅಧ್ಯಯನವನ್ನು ನಡೆಸಬೇಕೆಂದು ಅವರು ಹೇಳಿದ್ದಾರೆ.ಇಸ್ರೇಲ್‌ನಂತಹ ರಾಷ್ಟ್ರಗಳಲ್ಲಿ ಅದನ್ನು ಬಹಳ ಯಶಸ್ವಿಯಾಗಿ ನಡೆಸಲಾಗಿದ್ದು ಅಮೆರಿಕ ಕೂಡಾ ಈ ದಾರಿಯಲ್ಲಿ ಸಾಗಬೇಕಿದೆ ಎಂದು ಟ್ರಂಪ್ ವಾದಿಸಿದ್ದಾರೆ.

 ದೇಶದ ಮುಸ್ಲಿಂ ಸಮುದಾಯ ಶಂಕಿತರ ಬಗ್ಗೆ ಸರಕಾರಕ್ಕೆ ತಿಳಿಸುವವರಲ್ಲ. ದೇಶದ ಮಸೀದಿಯನ್ನು ನಿರೀಕ್ಷಣೆಯಲ್ಲಿರಿಸಬೇಕೆಂದು ಆಗ್ರಹಿಸಿದ್ದಾರೆ. 2015ರ ನವೆಂಬರ್‌ನಲ್ಲಿ ಮುಸ್ಲಿಮರಿಗೆ ಅಮೆರಿಕ ಪ್ರವೇಶಿಸಲು ಅನುಮತಿಸಬಾರದೆಂದು ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News