×
Ad

ಕಡಬ: ಮಲೇರಿಯ ಮಾಸಾಚರಣೆ ಮಾಹಿತಿ ಶಿಬಿರ

Update: 2016-06-20 16:09 IST

ಕಡಬ, ಜೂ.20: ಜೇಸಿಐ ಕಡಬ ಕದಂಬ ಮತ್ತು ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್(ರಿ.) ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಡಬ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಲೇರಿಯಾ ಮಾಸಾಚರಣೆ ಮಾಹಿತಿ ಶಿಬಿರ ವು ನೂಜಿಬಾಳ್ತಿಲ ಬೆಥನಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಅಪರಾಹ್ನ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಟ್ರುಪ್ಪಾಡಿ ತಾ.ಪಂ. ಸದಸ್ಯ ಜೇಸಿ. ಗಣೇಶ್ ಕೈಕುರೆ ಮಾತನಾಡಿದರು.

ಜೇಸಿಐ ಕಡಬ ಕದಂಬದ ಘಟಕಾಧ್ಯಕ್ಷ ಜೇಸಿ. ಜಯರಾಮ ಆರ್ತಿಲ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಜಯರಾಮ ಪೂಜಾರಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.

ವೇದಿಕೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಅಶೋಕ್ ರೈ, ಬೆಥನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಾರ್ಜ್ ಟಿ.ಎಸ್., ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ., ನಿಕಟಪೂರ್ವಾಧ್ಯಕ್ಷ ಜೇಸಿ. ದಿನೇಶ್ ಆಚಾರ್ಯ, ಘಟಕದ ಕಾರ್ಯದರ್ಶಿ ಜೇಸಿ. ರವಿಚಂದ್ರ ಪಡುಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News