ಬಿಳಿನೆಲೆ: ವಿಶ್ವ ಪರಿಸರ ದಿನಾಚರಣೆ
Update: 2016-06-20 16:13 IST
ಕಡಬ, ಜೂ.20: ಬಿಳಿನೆಲೆ ಸಮೀಪದ ಕೈಕಂಬ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ವಿವಿಧ ಗಿಡಗಳನ್ನು ನೆಟ್ಟು ಪರಿಸರ ದಿನವನ್ನಾಗಿ ಆಚರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶಾರದಾ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿ, ಒಬ್ಬ ವಿದ್ಯಾರ್ಥಿ ಒಂದು ಮರವನ್ನು ನೆಟ್ಟು ಬೆಳೆಸಿದರೆ ಅದು ಪರಿಸರಕ್ಕೆ ಕೊಡುವ ಬಲು ದೊಡ್ಡ ಕೊಡುಗೆಯಾಗುತ್ತದೆ. ಪರಿಸರ ತನ್ನ ಸೊಬಗನ್ನು ಉಳಿಸಿಕೊಂಡು ಮನುಷ್ಯ ಜೀವನಕ್ಕೆ ಪೂರಕವಾಗಿರಬೇಕಾದರೆ ಪರಿಸರದ ಸಂರಕ್ಷಣೆ ಮಾಡುವುದು ಅನಿವಾರ್ಯ. ಹೆಚ್ಚು ಹೆಚ್ಚು ಮರಗಳನ್ನು ನೆಡುವ ಮೂಲಕ ಅರಣ್ಯ ಬೆಳೆಯಲು ನಾವು ಕೈ ಜೋಡಿಸಬೇಕು ಎಂದರು.