ಹೈಲಾಂಡ್ ಇಸ್ಲಾಮಿಕ್ ಫೋರಂ ವತಿಯಿಂದ ಇಫ್ತಾರ್ ಕೂಟ

Update: 2016-06-20 17:23 GMT

ಮಂಗಳೂರು, ಜೂ.20: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ವತಿಯಿಂದ ಇಫ್ತಾರ್ ಕೂಟವು ನಗರದ ಫಳ್ನೀರ್‌ನಲ್ಲಿರುವ ಮಸ್ಜಿದುಲ್ ಇಹ್ಸಾನ್‌ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅಬ್ದುರ್ರಹೀಂ ಸಗ್ರಿ ಧಾರ್ಮಿಕ ಪ್ರವಚನ ನೀಡಿದರು.

ಈ ಸಂದರ್ಭ ಎಚ್‌ಐಎಫ್‌ನ ವಾರ್ಷಿಕ ಚಟುವಟಿಕೆಯನ್ನು ವಿವರಿಸುವ ಕೈಪಿಡಿಯನ್ನು ಎಚ್‌ಐಎಫ್ ಅಧ್ಯಕ್ಷ ನಝೀಮ್ ಎಸ್.ಎಸ್., ಕಾರ್ಯದರ್ಶಿ ಔಸಫ್ ಹುಸೈನ್, ಕೋಶಾಧಿಕಾರಿ ಸಜೀದ್ ಎ.ಕೆ., ಮತ್ತು ಮಸ್ಜಿದುಲ್ ಇಹ್ಸಾನ್ ಖತೀಬ್ ಮೌಲಾನಾ ತಯ್ಯುಬ್ ಬಿಡುಗಡೆಗೊಳಿಸಿದರು. ಇದೇ ವೇಳೆ ‘ನಿರ್ಲಕ್ಷಕ್ಕೆ ಒಳಪಟ್ಟ ಅಲ್ಲಾಹನ ಭವನ’ ಎಂಬ ಸಾಕ್ಷಚಿತ್ರವನ್ನು ಮುಹಮ್ಮದ್ ರಿಝ್ವೆನ್ ಬಿಡುಗಡೆಗೊಳಿಸಿದರು.

ಮೆಹಫೂಝ್ ಕಿರಾಅತ್ ಪಠಿಸಿದರು. ರೈಫ್ ವಂದಿಸಿದರು.

ಕಾರ್ಯಕ್ರಮದಲ್ಲಿ ಎಚ್‌ಸಿಸಿಸಿಯ ಅಧ್ಯಕ್ಷ ಮೊಯ್ದಿನ್ ವರ್ಲ್ಡ್‌ವೈಡ್, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

‘ನಿರ್ಲಕ್ಷಕ್ಕೆ ಒಳಪಟ್ಟ ಅಲ್ಲಾಹನ ಭವನ’ ಸಾಕ್ಷಚಿತ್ರವನ್ನು 9886017265, 9845136023 ಈ ಸಂಖ್ಯೆಗಳಿಗೆ ಕರೆ ಮಾಡಿ ವಾಟ್ಸಾಪ್ ಮೂಲಕ ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News