ಮಹಿಳೆಯರು ಸ್ವಾವಲಂಬಿಗಳಾಗಬೇಕು: ಜೆ.ಆರ್.ಲೋಬೊ

Update: 2016-06-20 14:14 GMT

ಮಂಗಳೂರು, ಜೂ. 20:ಮಹಿಳೆಯರು ಸ್ವಾವಲಂಬಿಗಳಾದರೆ ಸಮಾಜವು ಎತ್ತರಕ್ಕೆ ಬೆಳೆಯಬಹುದು. ಮಹಿಳೆಯರು ಹೇಗೆ ಒಂದು ಸಂಸಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೋ, ಅದೇ ರೀತಿ ಸ್ವಂತ ಉದ್ದಿಮೆಯಲ್ಲಿ ಕೂಡ ತನ್ನ ಕಾರ್ಯಶೀಲತೆಯಿಂದ ಯಶಸ್ವಿಯಾಗಬಹುದು ಎಂದು ಶಾಸಕ ಜೆ.ಆರ್. ಲೋಬೊ ಹೇಳಿದರು.

ಅವರು ಇತ್ತೀಚೆಗೆ ಕಸಬಾ ಬಂಗರೆಯ ಖಳ್‌ರಿಯ ಸೇವಾ ಸಂಘದ 8ನೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ 9 ಮಂದಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಿಸಿ ಮಾತನಾಡಿದರು.

ಸಮಾಜದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನವಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸವನ್ನು ಕೂಡ ಪಡೆದಿರುತ್ತಾರೆ. ಸ್ವಂತ ಉದ್ಯೋಗವನ್ನು ಅನೇಕ ಮಹಿಳೆಯರು ನಡೆಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸಯ್ಯದ್ ಆಲಿ, ಮಾಜಿ ಕಾರ್ಪೊರೇಟರ್ ಎಂ.ಫಾರೂಕ್, ಟಿ.ಕೆ. ಸುಧೀರ್, ಅಸ್ಲಾಂ ಬೆಂಗ್ರೆ, ಆಸೀಫ್ ಅಹ್ಮದ್, ಬಿ. ಇಸ್ಮಾಯೀಲ್ ಹಾಜಿ, ರಮಾನಂದ ಪೂಜಾರಿ, ಬಿಲಾಲ್ ಮೊದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News