×
Ad

ಮನೆಗೆ ನುಗ್ಗಿ ಮಾನಭಂಗ ಯತ್ನ ಪ್ರಕರಣ: ಐವರು ಆರೋಪಿಗಳಿಗೆ ಜಾಮೀನು

Update: 2016-06-20 20:22 IST

ಉಪ್ಪಿನಂಗಡಿ, ಜೂ.20: ಮಾನಭಂಗ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳಿಗೆ ಮಂಗಳೂರು ಪ್ರಧಾನ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

ಆರೋಪಿಗಳಾದ ಉರುವಾಲು, ಕುಪ್ಪೆಟ್ಟಿ ನಿವಾಸಿಗಳಾದ ಮುಹಮ್ಮದ್ ರಫೀಕ್, ನವಾಝ್, ಯಾಸೀರ್, ಕೆ. ಇಬ್ರಾಹೀಂ, ರಫೀಕ್ ಎಂಬವರಿಗೆ ಜಾಮೀನು ನೀಡಿದೆ. ಇವರು ಉರುವಾಲು ಗ್ರಾಮದ ರೊಹಾರ ಎಂಬವರು ನೆಕ್ಕಿಲು ಎಂಬಲ್ಲಿರುವ ತನ್ನ ಸಹೋದರ ಹಂಝರ ಮನೆಗೆ ಹೋಗಿದ್ದಾಗ ಅಲ್ಲಿಗೆ ಬಂದ ಆರೋಪಿಗಳು ಅಲ್ಲಿದ್ದ ಆಟೊ ಚಾಲಕ ಹ್ಯಾರೀಸ್ ಹಾಗೂ ರೆಹಾರನ ತಮ್ಮನ ಮೇಲೆ ಹಲ್ಲೆ ನಡೆಸಿ, ಮನೆಯಲ್ಲಿದ್ದ ಮಹಿಳೆಯರ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಈ ಘಟನೆಗೆ ಹ್ಯಾರೀಸ್ ಹಾಗೂ ಮುಹಮ್ಮದ್ ರಫೀಕ್‌ರ ಮೇಲಿನ ಹಳೆದ್ವೇಷವೇ ಕಾರಣ ಎಂದು ರೊಹಾರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಮೇಲೆ 143, 147, 448, 323, 504, 506, 354, 149 ಐಪಿಸಿ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ನ್ಯಾಯಾಲಯ ಆರೋಪಿಗಳನ್ನು ನಿರೀಕ್ಷಣಾ ಜಾಮೀನು ನೀಡಿದೆ.

ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಅನಿಲ್ ಕುಮಾರ್ ಉಪ್ಪಿನಂಗಡಿ ಹಾಗೂ ಸಂದೇಶ್ ನಟ್ಟಿಬೈಲು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News