ಮಂಜೇಶ್ವರ: ವಿದ್ಯುತ್ ಕಂಬ ಸಹಿತ ಬಾವಿ ಕುಸಿತ
Update: 2016-06-20 20:33 IST
ಮಂಜೇಶ್ವರ, ಜೂ.20: ಬೇಕೂರು ಬಳಿ ವಿದ್ಯುತ್ ಕಂಬ ಸಹಿತ ಬಾವಿ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.
ಬೇಕೂರು ಶಾಂತಿಗುಡಿಯಲ್ಲಿ ಅಡಿಕೆ ವ್ಯಾಪಾರಿಯಾಗಿರುವ ಅಗರ್ತಿಮೂಲೆ ನಿವಾಸಿ ಅಬ್ದುರ್ರಹ್ಮಾನ್ ಎಂಬವರ ಮನೆ ಪರಿಸರದ ಬಾವಿ ರವಿವಾರ ಸಂಜೆ ಕುಸಿದು ಘಟನೆ ನಡೆದಿದೆ.
ಈ ವೇಳೆ ಸನಿಹದ ವಿದ್ಯುತ್ ಕಂಬವೂ ಕುಸಿದು ಬಾವಿಯೊಳಗೆ ಬಿದ್ದಿದೆ. ಬಳಿಕ ವಿದ್ಯುತ್ ಇಲಾಖೆಯ ಅಧಿಕೃತರು ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಮೋಟಾರು ಪಂಪ್,ಬಾವಿಯ ದಂಡಿಗೆ, ಹಗ್ಗ ಸಹಿತ ಬಾವಿಗೆ ಬಿದ್ದು ಮುಚ್ಚಿಹೋಗಿದೆ. ಸುಮಾರು 1 ಲಕ್ಷ ರೂ.ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.