ಜೂ.21ರಿಂದ ಸಚಿವ ಖಾದರ್ ಉಮ್ರಾಯಾತ್ರೆ
Update: 2016-06-20 21:05 IST
ಮಂಗಳೂರು, ಜೂ.20: ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಜೂ.21 ರಿಂದ 4 ದಿನಗಳ ಕಾಲ ವರ್ಷಂಪ್ರತಿಯಂತೆ ಉಮ್ರಾ ಯಾತ್ರೆ ಕೈಗೊಳ್ಳಲಿದ್ದಾರೆ.
ಜೂ.21 ರಂದು ಸೌದಿರೇಬಿಯಕ್ಕೆ ತೆರಳಲಿರುವ ಅವರು ಕುಟುಂಬ ಸಮೇತ ಉಮ್ರಾ ಯಾತ್ರೆಗೈಯಲಿದ್ದಾರೆ.
ಯಾತ್ರೆ ಮುಗಿಸಿ ಜೂ.26 ರಂದು ಅವರು ಮಂಗಳೂರಿಗೆ ಹಿಂದಿರುಗಲಿದ್ದಾರೆ. ಈ ಸಂದರ್ಭದಲ್ಲಿ ಸಚಿವರು ಸಾರ್ವಜನಿಕರಿಗೆ ಅಲಭ್ಯವಿದ್ದು ತುರ್ತು ಅವಶ್ಯಕತೆ ಇದ್ದರೆ ಸಚಿವರ ಆಪ್ತ ಸಹಾಯಕರ ದೂರವಾಣಿ ಸಂಖ್ಯೆ 9343346439 ಮತ್ತು 7204440444 ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.