×
Ad

ಮಂಜೇಶ್ವರ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆ ಖಂಡಿಸಿ ಪ್ರತಿಭಟನೆ

Update: 2016-06-20 21:30 IST

ಮಂಜೇಶ್ವರ, ಜೂ.20: ಉತ್ತಮ ದಿನಗಳು ಮರಳಲಿವೆಯೆಂದು ಪ್ರಚಾರ ಮಾಡುವ ಬಿಜೆಪಿ ಜನಸಾಮಾನ್ಯರ ಸಂಕಷ್ಟಗಳನ್ನು ಗಮನಿಸುತ್ತಿಲ್ಲ. ವಿಶ್ವ ಪರ್ಯಟನೆಯಲ್ಲಿ ನಿತ್ಯ ಕಾಲಹರಣ ಮಾಡುವ ಮೋದಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಕಡಿಮೆದರದ ಪೆಟ್ರೋಲಿಯಂ ಉತ್ಪನ್ನಗಳನ್ನು ದುಬಾರಿ ಬೆಲೆಯಲ್ಲಿ ಮಾರಾಟಮಾಡುವ ಮೂಲಕ ಜನರನ್ನು ವಂಚಿಸುತ್ತಿದೆಯೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೇಶವಪ್ರಸಾದ ನಾಣಿತ್ತಿಲು ಆರೋಪಿಸಿದ್ದಾರೆ.

ಮಂಜೇಶ್ವರ ವಿಧಾನ ಸಬಾ ಕ್ಷೇತ್ರದ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ತೀವ್ರ ಬೆಲೆಯೇರಿಕೆಯನ್ನು ಖಂಡಿಸಿ ಸೋಮವಾರ ನಡೆದ ಪ್ರತಿಭಟನಾ ರ್ಯಾಲಿ ಮತ್ತು ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬಿಜೆಪಿಯ ಒಂದು ವಿಭಾಗ ಪ್ರಧಾನಿಯನ್ನು ವ್ಯರ್ಥವಾಗಿ ಪ್ರಚಾರಗೊಳಿಸುವ ಯತ್ನದಲ್ಲಿದೆ. ಆದರೆ ಅವರಿಗೆ ಜನಸಾಮಾನ್ಯರ ಸಂಕಷ್ಟಗಳು ಅರ್ಥವಾಗುತ್ತಿಲ್ಲ. ಇಂದಿನ ಆಧುನಿಕ ತಂತ್ರಜ್ಞಾನದ ಮೂಲಕ ಲೋಕ ಮಾರುಕಟ್ಟೆಯ ವಿವರಗಳನ್ನು ಗ್ರಹಿಸುವುದು ಸಾಧ್ಯವಾದರೆ ಪೆಟ್ರೋಲ್ ದರದ ನೈಜ ಚಿತ್ರಣ ಅರಿವಾಗುವುದು. ಈ ಹಿನ್ನೆಲೆಯಲ್ಲಿ ಜಾಗೃತ ಜನತೆ ಮೋದಿಯವರ ಕಪಟ ಅಭಿವೃದ್ದಿ ಮಂತ್ರವನ್ನು ಗ್ರಹಿಸಲು ಸಶಕ್ತವಾಗಿದೆಯೆಂದು ಅವರು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಜನಸಾಮಾನ್ಯರು ಕನಿಷ್ಠ ಆವಶ್ಯಕತೆಗಳ ನಿರ್ವಹಣೆಗೆ ಪರದಾಡುವ ಸ್ಥಿತಿ ಹತಾಶೆಗೊಳಿಸುತ್ತಿದೆ. ಬೃಹತ್ ಉದ್ಯಮಪತಿಗಳ ದಾಳಗಳಾಗಿ ಕಾರ್ಯಾಚರಿಸುತ್ತಿರುವ ಕೇಂದ್ರ ಸರಕಾರ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆಯೆಂದು ಅವರು ತಿಳಿಸಿದರು.

ಕುಂಬಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಮಿಕುಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮರ್ ಬೋರ್ಕಳ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುಂದರ ಆರಿಕ್ಕಾಡಿ, ಜಿಲ್ಲಾ ಕಾಂಗ್ರೆಸ್ ಸದಸ್ಯ ಮಂಜುನಾಥ ಆಳ್ವ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸಿ.ಎಂ.ಅಬ್ದುಲ್ಲ ಕುಂಞಿ,ಆಮು ಅಡ್ಕಸ್ಥಳ, ಯುವ ಕಾಂಗ್ರೆಸ್ ಮುಖಂಡ ನಾಸಿರ್ ಮೊಗ್ರಾಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಾ ಆರ್.ನಾಯರ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಮಮತಾ ದಿವಾಕರ್, ಸುನಿತ್ ಕುಮಾರ್, ಗುರುವಪ್ಪ ಮಂಜೇಶ್ವರ, ಪಿ.ಎನ್.ಕಮರುದ್ದೀನ್ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.

ಧರಣಿಗೂ ಮೊದಲು ಕುಂಬಳೆ ಪೇಟೆಯಲ್ಲಿ ಪ್ರತಿಟನಾ ರ್ಯಾಲಿ ನಡೆಯಿತು. ಲೋಕನಾಥ ಶೆಟ್ಟಿ, ರವಿ ಪೂಜಾರಿ, ಕುಂಞಿ ಅಹ್ಮದ್ ಮೊಗ್ರಾಲ್, ಸುಮಿತ್ರಾ ಕೋಟೆಕಾರ್, ಕೇಶವ ದರ್ಬಾರ್‌ಕಟ್ಟೆ, ನಾರಾಯಣ ನಂಬ್ಯಾರ್, ಬಿ.ಎಸ್.ಗಾಂಭೀರ್, ರಾಘವೇಂದ್ರ ಭಟ್ ತಲೆಂಗಳ, ಹನೀಫ್ ಚೇರಾಲು, ನಾರಾಯಣ ಏದಾರು, ಗೀತಾ ಬಂದ್ಯೋಡು, ಸತ್ಯನ್ ಸಿ.ಉಪ್ಪಳ, ಅಬ್ದುಲ್ ಖಾದರ್ ಅರಿಮಲೆ, ಸತ್ಯನಾರಾಯಣ ಕಲ್ಲೂರಾಯ, ಮುಹಮ್ಮದ್ ಮಜಾಲು, ಬಾಲಕೃಷ್ಣ ಶೆಟ್ಟಿ ಕಿದೂರು, ಬಿ.ತಿಮ್ಮಪ್ಪ, ಲಕ್ಷ್ಮಣ ಪ್ರಭು ಕುಂಬಳೆ, ರಾಮ ಭಟ್ ಕೆರೆಮೂಲೆ, ಎಸ್.ಎನ್. ರಾವ್, ಮೋಹನ ರೈ ಮೊದಲಾದವರು ರ್ಯಾಲಿಯ ನೇತೃತ್ವ ವಹಿಸಿದ್ದರು.

ಪಿ.ಸೋಮಪ್ಪಸ್ವಾಗತಿಸಿ, ರವಿ ಪೂಜಾರಿ ಕೋಟೆಕಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News