ಇಂಡೋನೇಶ್ಯ ಪ್ರವಾಹ: 43 ಸಾವು, 19 ಮಂದಿ ನಾಪತ್ತೆ
Update: 2016-06-20 22:20 IST
ಜಕಾರ್ತ (ಇಂಡೋನೇಶ್ಯ), ಜೂ. 20: ಇಂಡೋನೇಶ್ಯದ ಜಾವ ಪ್ರಾಂತದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತಗಳಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೆ ಏರಿದೆ ಎಂದು ವಿಪತ್ತು ನಿರ್ವಹಣೆ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.
ಪ್ರಾಕೃತಿಕ ವಿಕೋಪದ ಘಟನೆಗಳಲ್ಲಿ 14 ಮಂದಿ ಗಾಯಗೊಂಡಿದ್ದಾರೆ ಹಾಗೂ 19 ಮಂದಿ ನಾಪತ್ತೆಯಾಗಿದ್ದಾರೆ.
ನೂರಾರು ರಕ್ಷಣಾ ಸಿಬ್ಬಂದಿ ಸೋಮವಾರ ಬೆಳಗ್ಗೆ ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯವನ್ನು ಪುನಾರಂಭಿಸಿದರು.
ಪುರ್ವೆರೆಜೊ, ಬಂಜಾರ್‌ನೆಗರ ಮತ್ತು ಕೆಬುಮನ್ ಜಿಲ್ಲೆಗಳು ಭಾರೀ ಪ್ರಮಾಣದಲ್ಲಿ ಹಾನಿಗೀಡಾಗಿವೆ.
ಶನಿವಾರ ಮಧ್ಯಾಹ್ನದ ಬಳಿಕ ನಿರಂತರ ಸುರಿದ ಮಳೆಯಿಂದಾಗಿ 16 ಜಿಲ್ಲೆಗಳು ಮತ್ತು ನಗರಗಳಲ್ಲಿ ಪ್ರವಾಹ ತಲೆದೋರಿದೆ.