×
Ad

ಸುರತ್ಕಲ್: ಮಾರಿಯಮ್ಮ ದೇವಸ್ಥಾನದಲ್ಲಿ ಕಳ್ಳತನ

Update: 2016-06-20 22:56 IST

ಮಂಗಳೂರು, ಜೂ.20: ಶನಿವಾರ ರಾತ್ರಿ ಸುರತ್ಕಲ್‌ನ ಮಾರಿಯಮ್ಮ ದೇವಸ್ಥಾನದ ಬೀಗ ಮುರಿದು ಒಳಹೊಕ್ಕ ಕಳ್ಳರು ಸುಮಾರು 1 ಲಕ್ಷ ರೂ. ವೌಲ್ಯದ ಸೊತ್ತನ್ನು ಕಳವುಗೈದಿದ್ದಾರೆ.

ರವಿವಾರ ಬೆಳಗ್ಗೆ ದೇವಸ್ಥಾನದಲ್ಲಿ ಕಳವುಗೈದಿರುವುದು ಬೆಳಕಿಗೆ ಬಂದಿದೆ.

ಕಳ್ಳರು ದೇವಸ್ಥಾನದ ದಕ್ಷಿಣ ದಿಕ್ಕಿನಲ್ಲಿರುವ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಗರ್ಭಗುಡಿ ಪ್ರವೇಶ ದ್ವಾರ ಬೀಗವನ್ನು ಮುರಿದು 1 ಪಂಚಲೋಹದ ದುರ್ಗದೇವಿಯ ವಿಗ್ರಹ , 3 ಬೆಳ್ಳಿಯ ತಂಬಿಗೆ, 3 ಬೆಳ್ಳಿಯ ಮುಖವಾಡ, 1 ಬೆಳ್ಳಿಯ ಉದ್ದರಣೆ , ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News