×
Ad

ಉಳ್ಳಾಲ ದರ್ಗಾ ವಠಾರದಲ್ಲಿ ‘ಯಾತ್ರಿ ನಿವಾಸ’ ನಿರ್ಮಾಣ: ಹಾಜಿ ಅಬ್ದುಲ್ ರಶೀದ್

Update: 2016-06-20 23:01 IST

ಉಳ್ಳಾಲ, ಜೂ.20: ದರ್ಗಾ ವಠಾರದಲ್ಲಿ ಯಾತ್ರಿ ನಿವಾಸ ನಿರ್ಮಾಣ ಯೋಜನೆ ಉಳ್ಳಾಲ ದರ್ಗಾ ಸಮಿತಿಯ ಮುಂದಿದ್ದು ಸರಕಾರದ ವಿವಿಧ ಅನುದಾನ ಬಳಸಿ ನಿರ್ಮಾಣ ಮಾಡಲಾಗುವುದು ಎಂದು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.

ಉಳ್ಳಾಲ ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿ ಆಶ್ರಯದಲ್ಲಿ ಮಸೀದಿಯ ವಠಾರದಲ್ಲಿ ನಡೆದ ಸಾಮೂಹಿಕ ಇಫ್ತಾರ್ ಕೂಟದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ದರ್ಗಾದ ಮಾಜಿ ಲೆಕ್ಕ ಪರಿಶೋಧಕ ಅಮೀರ್ ಹಾಜಿ ಪಟ್ಲ ಮಾತನಾಡಿದರು. ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹ್ ಅಧ್ಯಕ್ಷತೆ ವಹಿಸಿದ್ದರು.

ದರ್ಗಾ ಪ್ರಧಾನ ಕಾರ್ಯದರ್ಶಿ ತ್ವಾಹಾ ಹಾಜಿ, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ದರ್ಗಾ ಸಮಿತಿ ಸದಸ್ಯರಾದ ಫಾರೂಕ್ ಉಳ್ಳಾಲ್, ಆಸಿಫ್ ಅಬ್ದುಲ್ಲಾ, ಹನೀಫ್ ಚೆಂಬುಗುಡ್ಡೆ, ಮೊಯ್ದಿನಬ್ಬ ಬೊಟ್ಟು, ಮೊಯ್ದಿನಬ್ಬ ಆಝಾದ್‌ನಗರ, ಅಬ್ಬಾಸ್ ಪಿಲಾರ್, ಜಬ್ಬಾರ್ ಮೇಲಂಗಡಿ, ನೌಷಾದ್ ಮೇಲಂಗಡಿ, ದರ್ಗಾ ಚಾರಿಟೇಬಲ್ ಟ್ರಸ್ಟ್ ಮಾಜಿ ಕಾರ್ಯದರ್ಶಿ ಅಹ್ಮದ್ ಬಾವ, ಕೋಟೆಪುರ ಜುಮಾ ಮಸೀದಿ ಉಪಾಧ್ಯಕ್ಷ ಅನ್ವರ್, ಮಿಲ್ಲತ್ ನಗರ ಜುಮಾ ಮಸೀದಿ ಅಧ್ಯಕ್ಷ ಖಲೀಲ್, ಬಾವಾ ಅಹ್ಮದ್, ಪೇಟೆ ಮಸೀದಿ ಅಧ್ಯಕ್ಷ ಮೊಯಿದ್ದೀನ್ ಹಸನ್, ಮುಹಿಯುದ್ದೀನ್ ಜುಮಾ ಮಸೀದಿಯ ಉಪಾಧ್ಯಕ್ಷ ನಝೀರ್ ಬಾರ್ಲಿ, ಕಾರ್ಯದರ್ಶಿ ಯು.ಬಿ.ಸಿದ್ದೀಕ್ ಮೊದಲಾದವರು ಉಪಸ್ಥಿತರಿದ್ದರು.

ಮುಹಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದರು. ವ್ಯವಸ್ಥಾಪಕ ರಹೀಂ ಎಲ್ಯಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News