ನಾಳೆ ಮಂಗಳೂರು ಜಂಕ್ಷನ್-ಪಡೀಲು ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ
ಉಡುಪಿ, ಜೂ.20: ದಕ್ಷಿಣ ರೈಲ್ವೆಯ ವತಿಯಿಂದ ಮಂಗಳೂರು ಜಂಕ್ಷನ್ ಹಾಗೂ ಪಡೀಲು ನಡುವೆ ನಿರ್ಮಾಣಗೊಳ್ಳುತ್ತಿರುವ ಹೊಸ ಸಬ್‌ವೇಯ ಇಂಜಿನಿಯರಿಂಗ್ ಕೆಲಸಗಳು ನಡೆಯಲಿರುವ ಹಿನ್ನೆಲೆ ಯಲ್ಲಿ ಜೂ.22ರಂದು ಅಪರಾಹ್ನ 1:30ರಿಂದ 7 ಗಂಟೆ ಯವರೆಗೆ ಈ ಮಾರ್ಗದಲ್ಲಿ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟನೆ ತಿಳಿಸಿದೆ.
ಅಂದಿನ ಮೂಕಾಂಬಿಕಾ ರೋಡ್ ಬೈಂದೂರು- ಕಾಸರಗೋಡು ರೈಲಿನ ಸಂಚಾರ ಮಂಗಳೂರು ಜಂಕ್ಷನ್-ಮೂಕಾಂಬಿಕಾ ರೋಡ್ ಬೈಂದೂರು- ಮಂಗಳೂರು ಜಂಕ್ಷನ್ ನಡುವೆ ಭಾಗಶ: ರದ್ದುಗೊಳ್ಳಲಿದೆ. ಅದೇ ರೀತಿ ಮಡಂಗಾವ್- ಮಂಗಳೂರು- ಮಡಂಗಾವ್ ಡೇಮು ರೈಲಿನ ಸಂಚಾರವನ್ನು ತೋಕೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ರದ್ದುಗೊಳಿಸಲಾಗಿದೆ.
ಸಿಎಸ್‌ಟಿಎಂ- ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ತೋಕೂರು- ಬಂಟ್ವಾಳ- ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಿ ಮಂಗಳೂರು ಜಂಕ್ಷನ್‌ಗೆ 45 ನಿಮಿಷ ತಡವಾಗಿ ತಲುಪಲಿದೆ.
ಮಂಗಳೂರು ಜಂಕ್ಷನ್-ಸಿಎಸ್‌ಟಿಎಂ ಎಕ್ಸ್ ಪ್ರೆಸ್ ರೈಲು ಬಂಟ್ವಾಳ- ತೋಕೂರು ಮೂಲಕ ಸಂಚರಿಸಿ 60 ನಿಮಿಷ ವಿಳಂಬವಾಗಲಿದೆ. ಯಶವಂತಪುರ- ಕಾರವಾರ ಎಕ್ಸ್ ಪ್ರೆಸ್ 6:10ರಿಂದ 7 ಗಂಟೆಯವರೆಗೆ ತಡವಾಗಿ ತೋಕೂರಿಗೆ ಬರಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.