ಆರೋಪ ನಿಜವಾಗಿದ್ದಲ್ಲಿ ತಲೆದಂಡಕ್ಕೂ ಸಿದ್ಧ: ಆಸ್ಕರ್ ಫೆರ್ನಾಂಡಿಸ್
Update: 2016-06-21 18:15 IST
ಮಂಗಳೂರು,ಜೂ.21: ಬಿಲ್ಲವ ಸಮುದಾಯಕ್ಕೆ ಮೋಸ ಮಾಡಲಾಗಿದೆ ಎಂಬ ಬಿಲ್ಲವ ಮಹಾ ಮಂಡಲದ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್, ಆರೋಪ ನಿಜವಾಗಿದ್ದಲ್ಲಿ ತಲೆದಂಡಕ್ಕೂ ಸಿದ್ಧ ಎಂದು ಹೇಳಿದ್ದಾರೆ.
ನಗರದಲ್ಲಿಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರನ್ನು, ಬಿಲ್ಲವ ಮಹಾ ಮಂಡಲ ಅವರ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಸಚಿವರ ಆಯ್ಕೆ ನನ್ನದಾಗಿದ್ದರೆ, ನನ್ನ ಪಾತ್ರ ಇದೆ ಎಂದಾದಲ್ಲಿ ಅದಕ್ಕೆ ತಲೆಕೊಡಲು ನಾನು ಸಿದ್ಧ ಎಂದರು.