×
Ad

ಯುವತಿಯರ ಮೊಬೈಲ್ ಕದ್ದ ಕಳ್ಳರ ಬಂಧನ

Update: 2016-06-21 18:53 IST

ಉಳ್ಳಾಲ, ಜೂ.21: ಸೋಮೇಶ್ವರ ಬೀಚ್‌ನಲ್ಲಿ ವಿಹರಿಸುತ್ತಿದ್ದ ಯುವತಿಯರ ಸ್ಮಾರ್ಟ್ ಫೋನ್‌ಗಳೆರಡನ್ನು ಎಗರಿಸಿ ಓಡುತ್ತಿದ್ದ ಯುವಕರಿಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿ ಕದ್ದ ಮೊಬೈಲ್‌ಗಳನ್ನು ವಶಪಡಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಂಗಳೂರಿನ ಮಂಕಿ ಸ್ಟಾಂಡ್ ನಿವಾಸಿ ಹರ್ಷದ್ ಇಕ್ಬಾಲ್(25)ಮತ್ತು ಫಳ್ನೀರು ವಾಸ್‌ಲೇನ್ ನಿವಾಸಿ ಹಂರಾಝ್ ಯಾನೆ ಸರ್ಫಾಝ್(19)ಬಂಧಿತರು.

ಶನಿವಾರ ಸೋಮೇಶ್ವರ ಉಚ್ಚಿಲ ಬೀಚಲ್ಲಿ ವಿಹರಿಸುತ್ತಿದ್ದ ಯುವತಿಯರಿಬ್ಬರ ಬೆಲೆಬಾಳುವ 2 ಸ್ಮಾರ್ಟ್ ಫೋನ್‌ಗಳನ್ನು ಕಸಿದು ಪರಾರಿಯಾಗಿದ್ದರು.

ಉಳ್ಳಾಲ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದ ಕ್ರೈಂ ವಿಭಾಗದ ಪಿಎಸೈ ರಾಜೇಂದ್ರ, ಆರೋಪಿಗಳನ್ನು ಬಂಧಿಸಿ ಕದ್ದ ಮೊಬೈಲ್ ಫೋನ್‌ಗಳನ್ನು ವಶಕ್ಕೆ ತೆಗೆದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News