ಸುಳ್ಯದ ಹಲವೆಡೆ ವಿಶ್ವ ಯೋಗ ದಿನಾಚರಣೆ

Update: 2016-06-21 16:32 GMT

ಸುಳ್ಯ, ಜೂ.21: ಸುಳ್ಯದ ಕೆವಿಜಿ ಆಯುರ್ವೇದಿಕ್ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು. ಕಾಲೇಜಿನ ಸ್ವಸ್ಥವ್ರತಾ ವಿಭಾಗ ಹಾಗೂ ಎನ್ನೆಸ್ಸೆಸ್ ಘಟಕಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನಿನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸಿದರು.

ಪ್ರಾಧ್ಯಾಪಕಿ ಡಾ.ರೋಹಿಣಿ ಡಿ ಭಾರದ್ವಾಜ್ ವಿಶೇಷ ಉಪನ್ಯಾಸ ನೀಡಿದರು. ಅಕಾಡೆಮಿ ನಿರ್ದೇಶಕಿ ಶೋಭಾ ಚಿದಾನಂದ, ಕೆವಿಜಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಶೀಲಾ ಜಿ ನಾಯಕ್, ಆಡಳಿತಾಧಿಕಾರಿ ಜಗದೀಶ್ ಅಡ್ತಲೆ, ಕೆವಿಜಿ ಆಯುರ್ವೇದಿಕ್ ಕಾಲೇಜಿನ ಆಡಳಿತಾಧಿಕಾರಿ ಡಾ.ಡಿ.ವಿ.ಲೀಲಾಧರ್, ಪ್ರಾಧ್ಯಾಪಕಿ ಡಾ.ರೂಪಾ ಕುಲಕರ್ಣಿ ವೇದಿಕೆಯಲ್ಲಿದ್ದರು.

ಪ್ರಾಂಶುಪಾಲ ಡಾ.ಎನ್.ಎಸ್.ಶೆಟ್ಟರ್ ಸ್ವಾಗತಿಸಿ ಡಾ.ಅನುಶ್ರೀ ವಂದಿಸಿದರು. ಸಂಗೀತಾ ಮತ್ತು ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.

ಪೊಲೀಸ್ ಇಲಾಖೆ

ಪೊಲೀಸ್ ಇಲಾಖೆ ಆಶ್ರಯದಲ್ಲಿ ವನವಾಸಿ ವಿದ್ಯಾರ್ಥಿನಿಲಯ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದೊಂದಿಗೆ ಯೋಗ ದಿನಾಚರಣೆ ಸುಳ್ಯ ಕೇರ್ಪಳದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.

ಬೆಳಗ್ಗೆ 6ಗಂಟೆಯಿಂದ 8 ಗಂಟೆಯವರೆಗೆ ಯೋಗ ಅಭ್ಯಾಸ ಮಾಡಲಾಯಿತು. ಮೈಸೂರಿನ ರೇವತಿ ಹಾಗೂ ವಿಕ್ರಂ ಯೋಗ ಅಭ್ಯಾಸ ಹಾಗೂ ಅದರ ಮಹತ್ವದ ಕುರಿತು ತಿಳಿಸಿದರು. ವನವಾಸಿ ಕೇಂದ್ರದ ಜಿನ್ನು ಸಹಕರಿಸಿದರು.

ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣಯ್ಯ, ಎಸೈ ಚಂದ್ರಶೇಖರ್, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಹರೀಶ್ ಬಂಟ್ವಾಳ್, ತಾಲೂಕು ಅಧ್ಯಕ್ಷ ಶಿವಪ್ರಸಾದ್ ಕೇರ್ಪಳ, ವನವಾಸಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು, ಪೊಲೀಸರು, ಪತ್ರಕರ್ತರು ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಮಂದಿ ತರಬೇತಿಯಲ್ಲಿ ಭಾಗವಹಿಸಿದ್ದರು.

ಸೈಂಟ್ ಜೋಸೆಫ್ ಶಾಲೆ

ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗ ಕಾರ್ಯಾಗಾರವನ್ನು ಏರ್ಪಡಿಸಲಾಯಿತು.

ನಿವೃತ್ತ ಶಿಕ್ಷಕಿ ವಾಣಿ ಚಕ್ರಪಾಣಿ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳಿಗೆ ಯೋಗದ ಉಪಯೋಗ ಮತ್ತು ಯೋಗದ ಹಲವು ಆಸನಗಳ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಶಿಕ್ಷಕಿ ಅನಿತಾ ಸ್ವಾಗತಿಸಿ ವಂದಿಸಿದರು, ಸವಿತಾ ಎಸ್. ನಿರೂಪಿಸಿದರು, ಕೊರಗಪ್ಪ, ಪುಷ್ಪವೇಣಿ, ವಿನಯ್ ಸಹಕರಿಸಿದರು.

ಸ್ನೇಹ ಶಾಲೆ

ಸುಳ್ಯದ ಸ್ನೇಹ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಬಯಲು ಸೂರ್ಯ ದೇವಾಲಯದಲ್ಲಿ ಸೂರ್ಯ ನಮಸ್ಕಾರ ನಡೆಯಿತು. ಬಳಿಕ ಶಾಲಾ ಸಭಾಂಗಣದಲ್ಲಿ ವಿವಿಧ ಯೋಗಾಭ್ಯಾಸ ನಡೆಯಿತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ, ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ದಾಮ್ಲೆ ಮಾರ್ಗದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News